ಫೆ.7ರಂದು ಶಿವಶಕ್ತಿ ಸಂಗಮ, 11 ಸಾವಿರ ಮುತ್ತೈದೆಯರಿಗೆ ಸಮ್ಮಾನ

oppo_2
oppo_2
Published on

ಕಲಬುರಗಿ: ನಗರದ ಬ್ರಹ್ಮಪುರ, ಶಹಾಬಜಾರದ ಶ್ರೀ ಚವದಾಪೂರಿ ಹಿರೇಮಠದ ಶತಾಯುಷಿ ಲಿಂಗೈಕ್ಯ ಶ್ರೀ ಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಫೆ.7ರಂದು 11 ಸಾವಿರ ಮುತ್ತೈದೆಯರಿಗೆ ಉಡಿ ತುಂಬುವ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಡಾ.ರಾಜಶೇಖರ್ ಶಿವಾಚಾರ್ಯರು ತಿಳಿಸಿದರು.

ಬೆಳಗ್ಗೆ 9ಗಂಟೆಗೆ ಶ್ರೀ ಶಾಂತವೀರ ಶಿವಾಚಾರ್ಯರ ಅಮೃತಶಿಲಾ ಮೂರ್ತಿ, ಶಿಲಾ ಮಂಟಪ ಹಾಗೂ ಶಿಲಾ ಮಂದಿರ ಲೋಕಾರ್ಪಣೆ ನಡೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಂಭಾಪುರಿ ಶ್ರೀ ಶರಣಬಸವೇಶ್ವರ ದೇವಸ್ಥಾನದದ ಆವರಣದಲ್ಲಿ ಬೆಳಗ್ಗೆ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ರಂಭಾಪುರಿ ಜಗದ್ಗುರು ಶ್ರೀ ಡಾ.ವೀರಸೋಮೇಶ್ವರ ಶಿವಾಚಾರ್ಯರ ಪಾವನ ಸಾನ್ನಿಧ್ಯದಲ್ಲಿ ಶ್ರೀ ಡಾ.ಶರಣಬಸಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ, ಶ್ರೀ ಡಾ.ಮುರುಘರಾಜೇಂದ್ರ ಮಹಾಶಿವಯೋಗಿಗಳು, ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ. ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಶಾಂತವೀರ ಶಿವಾಚಾರ್ಯರ ದರ್ಶನಂ ಕೃತಿಯನ್ನು ಶರಣಬಸಪ್ಪ ದರ್ಶನಾಪುರ ಬಿಡುಗಡೆ ಮಾಡಲಿದ್ದಾರೆ. ಶಾಸಕರಾದ ಡಾ.ಅಜಯಸಿಂಗ್, ಬಿ.ಆರ್.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಮಾಜಿ ಸಂಸದ ಡಾ.ಉಮೇಶ್ ಜಾಧವ್ ಭಾಗವಹಿಸಲಿದ್ದಾರೆ. ಕೆಕೆಆರ್ ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಪ್ರಾಸ್ತಾವಿಕ ಮಾತನಾಡಲಿದ್ದಾರೆ ಎಂದು ಹೇಳಿದರು.

ಪದ್ಮಶ್ರೀ ಪುರಸ್ಕೃಗೆ ಶಾಂತಶ್ರೀ:

ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಕಲಾವಿದ ಪಂ ಡಾ.ಎಂ.ವೆಂಕಟೇಶಕುಮಾರ, ಖ್ಯಾತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಶಾಂತಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿವಿಧ ಪೂಜ್ಯರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.

ದೇವಾಪುರ, ನಗನೂರು, ತೊನಸನಳ್ಳಿ ಸ್ವಾಮೀಜಿಗಳು, ಕೆಕೆಆರ್ ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಪ್ರಮುಖರಾದ ಶಿವಕಾಂತ ಮಹಾಜನ್, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಅರುಣಕುಮಾರ ಪಾಟೀಲ್ ಮೇಳಕುಂದಾ ಇತರರು ಇದ್ದರು.

ಸ್ವಾಗತ ಸಮಿತಿ ಅಧ್ಯಕ್ಷ! ದತ್ತಾತ್ರೇಯ ಪಾಟೀಲ್ ರೇವೂರಸಾಮಾಜಿಕ, ಧಾರ್ಮಿಕ ಕ್ಷೇತ್ರದ ಮೂಲಕ ಚವದಾಪೂರಿ ಮಠವೂ ಸೇವೆ ಸಲ್ಲಿಸುತ್ತಿದ್ದು, ಪೂಜ್ಯರ ಪುಣ್ಯಸ್ಮರಣೋತ್ಸವ ನಿಮಿತ್ತ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ. ಭಕ್ತರು ತನು, ಮನ, ಧನದಿಂದ ಪಾಲ್ಗೊಂಡು ಪೂಜ್ಯರ ಕೃಪಾಶೀರ್ವಾದ ಪಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net