ಬೈರೇಗೌಡ್ರನ್ನು ಬಿಟ್ಟು ನನ್ನ ಮಾತಿಗೆ ಮಾತ್ರ ಏಕೆ ಸೀರಿಯಾಗಿದ್ದಾರೆ?: ಬಿಆರ್​ಪಿ ಕಿಡಿ

BR Patil
Published on

ಕಲಬುರಗಿ: ಡಿ.ಕೆ ಶಿವಕುಮಾರ, ದಿನೇಶ ಗುಂಡುರಾವ ನನ್ನ ಬಗ್ಗೆ ಮಾತನಾಡಿದ್ದಾರೆ. ಅವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು, ನನ್ನ ಹೇಳಿಕೆ ಖಂಡಿಸುವ ಸ್ವಾತಂತ್ರ$್ಯವಿದೆ. ಕೃಷ್ಣಬೈರೇಗೌಡರು ತಾಲೂಕು ಕಚೇರಿಗೆ ಹೋಗಿ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ. ಕಂದಾಯ ಇಲಾಖೆ ಸಚಿವರಾಗಿ ಅವರೇ ಹೇಳಿದ್ದಾರೆ ಲಂಚದ ಬೋರ್ಡ್​ ಹಾಕಿ ಅಂತ. ನನ್ನ ಹೇಳಿಕೆ ಮಾತ್ರ ಯಾಕೆ ಇಷ್ಟು ಸೀರಿಯಸ್​ ಆಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಬಿ.ಆರ್​.ಪಾಟೀಲ್​ ಎಂದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ದಾಟಿಯಲ್ಲೇ ಕೃಷ್ಣ ಬೈರೇಗೌಡರು ಕಾಳಜಿ ವ್ಯಕ್ತಪಡಿಸಿದ್ದಾರೆ. ನನ್ನನ್ನು ಮಾತ್ರ ಯಾಕೆ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಯಾರದ್ದು ತಪ್ಪು ಎಂಬುದು ಸಮಯ ಬಂದಾಗ ನಿರ್ಧಾರ ಆಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ತನಿಖೆ ಮಾಡುವುದಾದರೆ ಮಾಡಲಿ. ನಾನೇಕೆ ಆಗ್ರಹ ಮಾಡಲಿ. ನೇರವಾಗಿಯೇ ಹೇಳಿದ್ದೇನೆ. ಮುಖ್ಯಮಂತ್ರಿಗೆ ಎಲ್ಲವೂ ಗೊತ್ತಿದೆ. ಕೃಷ್ಣ ಬೈರೇಗೌಡರು ಹೇಳಿದ ಮಾತಿನ ಬಗ್ಗೆ ಏನಾಯಿತು. ಸಚಿವರೇ ಬೋರ್ಡ್​ ಹಾಕಿ ಎಂದಿದ್ದಾರೆ. ನನ್ನ ವಿಷಯ ಮಾತ್ರ ಏಕೆ ಮಾತಾಡುತ್ತಿದ್ದಾರೆ ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net