ಮಳಖೇಡ; ಬೈಕ್​ಗಳ ಡಿಕ್ಕಿ, ಓರ್ವ ಸಾವು

PH 03
Published on

ಮಳಖೇಡ: ಎರಡು ಬೈಕ್‌ಗಳ ಮಧ್ಯೆ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿ, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಮಳಖೇಡ ಮತ್ತು ಹೂಡಾ ಕೆ. ಕ್ರಾಸ್ ನಡುವಿನ ರಾಜ್ಯ ಹೆದ್ದಾರಿ- 10ರಲ್ಲಿ ಶುಕ್ರವಾರ ಸಂಭವಿಸಿದೆ.

ಕೊಂಕನಹಳ್ಳಿ ಗ್ರಾಮದ ಮಾಳಪ್ಪ ಪೂಜಾರಿ (30) ಮೃತ ದುರ್ದೈವಿ. ತೀವ್ರವಾಗಿ ಗಾಯಗೊಂಡ ರವಿ ಪೂಜಾರಿ ಕೊಂಕನಹಳ್ಳಿ ಹಾಗೂ ರೋಹಿತ್ ಮಾಡಬೂಳ ತಾಂಡಾ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಾಳಪ್ಪ ಉಡುಪಿಯಲ್ಲಿ ವಾಸವಾಗಿದ್ದ, ಕೆಲ ದಿನಗಳ ಹಿಂದೆ ಕೊಂಕನಹಳ್ಳಿಗೆ ಬಂದಿದ್ದ. ಶನಿವಾರ ಉಡುಪಿಗೆ ವಾಪಸ್​ ಆಗಬೇಕಿತ್ತು.

ಕೊಂಕನಹಳ್ಳಿಯಿಂದ ಮಳಖೇಡಕ್ಕೆ ಬರುವಾಗ ರಸ್ತೆ ಪಕ್ಕದಲ್ಲಿ ನಿಂತ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಮಳಖೇಡ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net