ಆಳಂದ; ಕಡಗಂಚಿ ಬಳಿ ಆ್ಯಕ್ಸಿಡೆಂಟ್​, ಇಬ್ಬರು ಯುವಕರು ಸಾವು

PH 03
Published on

ಆಳಂದ: ಸಾರಿಗೆ ಬಸ್​ ಮತ್ತು ದ್ವಿ-ಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ಕಡಗಂಚಿ -ಲಾಡಚಿಂಚೋಳಿ ಮಧ್ಯೆ ನಡೆದಿದೆ.

ಲಾಡಮುಗಳಿ ಗ್ರಾಮದ ಶಶಿಕಾಂತ ಶ್ರೀಮಂತ ಕಟ್ಟಬೂರೆ (27), ಶಿವಕುಮಾರ ಅಂಬಣ್ಣ (25) ಮೃತ ಯುವಕರು. ಲಾಡಮುಗಳಿಯಿಂದ ಕೋರಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಅಲ್ಲಿಂದ ಲಾಡಚಿಂಚೋಳಿ ಮಾರ್ಗವಾಗಿ ಕಡಗಂಚಿಗೆ ಬರುತ್ತಿರುವಾಗ ಕಲಬುರಗಿಯಿಂದ ಆಳಂದಕ್ಕೆ ಬರುವ ಬಸ್​ ಹಾಗೂ ಬೈಕ್​ ಮಧ್ಯೆ ಅಪಘಾತ ಸಂಭವಿಸಿದೆ.

ಡಿವೈಎಸ್‌ಪಿ ಗೋಪಿ ಆರ್, ಸಿಪಿಐ ಭಾಸು ಚವ್ಹಾಣ್​, ಪಿಎಸ್‌ಐ ಗಂಗಮ್ಮ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net