ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ

PH 03
Published on

ಅಫಜಲಪುರ: ಶ್ರಾವಣ ಮಾಸದ ನಿಮಿತ್ತ ತಾಲೂಕಿನ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾಭಿವ್ಯಕ್ತಿಯ ಗುಣಮಟ್ಟ ವೃದ್ಧಿಸಲು ಶ್ರೀ ಗುರು ಮಳೇಂದ್ರ ಸಂಸ್ಥಾನ ಹಿರೇಮಠದಿಂದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಮುಖಂಡ ಚಂದ್ರಶೇಖರ ಕರಜಗಿ ತಿಳಿಸಿದ್ದಾರೆ.

ಆ.25ರಂದು ಪಟ್ಟಣದ ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರವೇಶ ಪತ್ರ ಪಡೆದುಕೊಳ್ಳಬೇಕು. ಅಂತರ ಶಾಲಾ(ಹೈಸ್ಕೂಲï), ಅಂತರ ಪದವಿ ಪೂರ್ವ ಕಾಲೇಜು, ಅಂತರ ಮಹಾವಿಶ್ವವಿದ್ಯಾಲಯ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆ ವಿಷಯಗಳು: ಮಾನವ ಧರ್ಮಕ್ಕೆ ಜಯವಾಗಲಿ, ಸತ್ಯಮೇವ ಜಯತೆ, ನಮ್ಮ ಕರ್ನಾಟಕ, ನಮ್ಮ ದೇಶದ ಸಂವಿಧಾನ, ನಮ್ಮ ಕನಸಿನ ಭಾರತ. ಇದರಲ್ಲಿ ಒಂದು ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಪ್ರತಿ ಸ್ಪರ್ಧಿಗೆ 5 ನಿಮಿಷ ಸಮಯವಿದೆ. ವಿಜೇತರಿಗೆ ಪ್ರಥಮ ಬಹುಮಾನ 1500 ರೂ, ದ್ವಿತೀಯ ಬಹುಮಾನ 1000 ರೂ, ತೃತೀಯ ಬಹುಮಾನ 750 ರೂ, ಪ್ರೋತ್ಸಾಹ ಪುರಸ್ಕಾರ 500 ರೂ. ಸೇರಿ ವಿಜೇತರ ಪೋಟೋ ಸಹಿತ ಸ್ಮರಣಿಕೆ ನೀಡಲಾಗುವುದು. ಮಾಹಿತಿಗೆ 9449185368, 9535623193 ಸಂಪರ್ಕಿಸಲು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net