ವಾಕರ್ ಆ್ಯಂಡ್ ಜಾಗರ್ಸ್ ಅಸೋಸಿಯೇಷನ್‌ ವತಿಯಿಂದ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರಿಗೆ ಅದ್ಧೂರಿ ಸನ್ಮಾನ

ತೊಗರಿ ನಾಡಿನ ಜನರ ಮತ್ತು ಕ್ರೀಡಾಪಟುಗಳ ಜೀವಾಳವಾಗಿರುವ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣವನ್ನು ಮಾದರಿಯಾಗಿ ಸಮಗ್ರ ಆಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಕೆಕೆಆರ್‌ಡಿಬಿ ಅಧ್ಯಕ್ಷರಾದ ಶಾಸಕ ಡಾ.ಅಜಯ ಧರ್ಮಸಿಂಗ್ ಭರವಸೆ ನೀಡಿದರು.
IMG-20231012-WA0006
Published on

ಶಿವರಾಜ ಭಾಸಗಿ ನೇತೃತ್ವದಲ್ಲಿ ಕ್ರೀಡಾಂಗಣದಲ್ಲಿ ಜರುಗಿದ ಐತಿಹಾಸಿಕ ಅಭಿನಂದನಾ ಸಮಾರಂಭಕ್ಕೆ ಕಲಬುರಗಿ ನಗರದ ಗಣ್ಯರು ವೈದರು ಉದ್ಯಮಿಗಳು ಸೇರಿ ಅನೇಕರು ಸಾಕ್ಷಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ತೊಗರಿ ನಾಡಿನ ಜನರ ಮತ್ತು ಕ್ರೀಡಾಪಟುಗಳ ಜೀವಾಳವಾಗಿರುವ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣವನ್ನು ಮಾದರಿಯಾಗಿ ಸಮಗ್ರ ಆಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಕೆಕೆಆರ್‌ಡಿಬಿ ಅಧ್ಯಕ್ಷರಾದ ಶಾಸಕ ಡಾ.ಅಜಯ ಧರ್ಮಸಿಂಗ್ ಭರವಸೆ ನೀಡಿದರು.
ನಗರದ ಕ್ರೀಡಂಗಣದಲ್ಲಿ ಬುಧವಾರ ವಾಕರ್ಸ್ ಆ್ಯಂಡ್ ಜಾಗರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕ್ರೀಡಾಂಗಣದಲ್ಲಿ ಅವಶ್ಯಕತೆ ಇರುವಂತಹ ಸೌಲಭ್ಯ ಒದಗಿಸುವ ಕುರಿತು ಸಚಿವರೊಂದಿಗೆ ಚರ್ಚಿಸಿz್ದೆÃನೆ. ಹಂತ ಹಂತವಾಗಿ ಯಾವ ಯಾವ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು ನೋಡಿಕೊಂಡು ಮುಂದಿನ ಹೆಜ್ಜೆ ಇರಿಸಲಾಗುವುದು ಎಂದರು.
ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಅಧ್ಯಕ್ಷ ಬ್ರಿಜೇಶ್ ಪಟೇಲï ಅವರಿಗೆ ಅಸೋಸಿಯೇಷನ್ ಚಟುವಟಿಕೆ ನಡೆಸಲು ಭೇಟಿ ಮಾಡಿ ಮನವಿ ಮಾಡಿz್ದÉÃನೆ.ಇದರಿಂದಾಗಿ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜೇವರ್ಗಿಯಲ್ಲಿ ಮಾದರಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಅಲ್ಲಿ ಇನ್ನೊಂದಿಷ್ಟು ಆಟೋಟಗಳ ಅಂಕಣ ನಿರ್ಮಿಸಲು ಉz್ದÉÃಶಿಸಲಾಗಿದೆ. ಕಲಬುರಗಿ ಸೇರಿದಂತೆ ಈ ಭಾಗದ ಎಲ್ಲ ಕ್ರೀಡಾಂಗಣಗಳ ಅಭಿವೃದ್ಧಿ ಮಾಡಲು ಕ್ರೀಡಾ ಸಚಿವ ನಾಗೇಂದ್ರ ಅವರಿಗೆ ಮನವರಿಕೆ ಮಾಡಿ ಅನುದಾನ ತರೋಣ. ಅಲ್ಲದೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿAದ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಏಳನೇ ತರಗತಿಯಲ್ಲಿ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕ ಪಡೆದಿz್ದÉ ಎಂದು ಅಜಯಸಿಂಗ್ ನೆನಪಿಸಿಕೊಂಡರು. ನಾನು ಜಿಮï ಮಾಡುವುದು ಬಿಡಲ್ಲ. ತಂದೆ ಧರ್ಮಸಿಂಗ್ ಅವರು ವಾಕಿಂಗ್ ಬಿಡುತ್ತಿರಲಿಲ್ಲ. ಆರೋಗ್ಯದಿಂದ ಇದ್ದರೇ ಮಾತ್ರ ಅತ್ಯುತ್ತಮ ಜೀವನ ಸಾಗಿಸಬಹುದು. ಕ್ರೀಡೆಯಲ್ಲಿ ಆಸಕ್ತಿ ಇದೆ. ಕ್ರೀಡೆ ಇದ್ದರೇ ಜೀವನದಲ್ಲಿ ಒಂದಲ್ಲ ಒಂದು ದಿನ ಅನುಕೂಲ ಆಗುತ್ತದೆ ಎಂದು ಅಜಯಸಿಂಗ್ ತಿಳಿಸಿದರು.
ಹಿಂದುಳಿದ ಹಣೆಪಟ್ಟಿ ಕಕದಿಂದ ಅಳಿಸಲು ಅP್ಷÀರ ಆವಿಷ್ಕಾರ ಯೋಜನೆ ಮಾಡಿದ್ದು, ಅದೇ ಮಾದರಿಯಲ್ಲಿ ಇನ್ನಷ್ಟು ಹೊಸ ಯೋಜನೆ ಮಾಡಲು ಯೋಚಿಸುತ್ತಿದ್ದು ಪ್ರಗತಿಗಾಗಿ ಜನರು ಸಲಹೆ, ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಶಶೀಲï ನಮೋಶಿ ಮಾತನಾಡಿ, ಕ್ರೀಡಾಂಗಣ ಅಭಿವೃದ್ಧಿಗೆ ಪ್ಲಾನ್ ರೂಪಿಸಲಾಗಿದ್ದು, ಅದಕ್ಕೆ ಅನುದಾನ ನೀಡಬೇಕು. ಕ್ರೀಡಾಂಗಣವನ್ನು ಸಾವಿರಾರು ಕ್ರೀಡಾಪಟುಗಳು, ವಾಕರ್ಸ್, ಜಾಗರ್ಸ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಅಸೋಸಿಯೇಷನ್ ಅಧ್ಯP್ಷÀರಾದ ಕ್ಯಾಪ್ಟನ್ ಶಿವರಾಜ ಭಾಸಗಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯP್ಷÀ ಗುರುಲಿಂಗಪ್ಪಗೌಡ ಆಂದೋಲಾ, ಪ್ರಮುಖರಾದ ಡಾ.ಶಾಂತಕುಮಾರ ನಿಗ್ಗುಡಗಿ, ಗಣ್ಯರಾದ ಸುಭಾಷ ಬಿಜಾಪುರೆ, ಡಾ.ಎಸ್.ಬಿ.ಕಾಮರೆಡ್ಡಿ, ಡಾ.ಭರತ ಕೋಣಿನ್, ಡಾ.ಎಚ್.ವೀರಭದ್ರಪ್ಪ, ಡಾ.ಎನ್.ಜಿ.ಗಚ್ಚಿಮನಿ, ಡಾ.ಪ್ರಮೋದರೆಡ್ಡಿ ಇಟಗಿ, ಶ್ರೀಕಾಂತ ಲಾಹೋಟಿ, ಶಶಿಕಾಂತ ಪಾಟೀಲ, ಮಂಜುನಾಥ ಜೇವರ್ಗಿ, ಬಸವರಾಜ ಬಿರಾದಾರ ಸೊನ್ನ, ಸಂತೋಷ ಗುತ್ತೇದಾರ, ಸಂದೇಶ ಕಮಕನೂರ, ಭರತಭೂಷಣ,ಡಾ.ಶಿವಾನಂದ ಮೇಳಕುಂದಿ, ಸತೀಶ ಜೇವರ್ಗಿ, ಡಾ.ಕಿಶೋರಸಿಂಗ್, ಶಿವಪುತ್ರಪ್ಪ ಸೋಮಾ, ಎಂ.ಎ.ಹಾಲಕಾಯಿ, ಬಸವರಾಜ ವಾಲಿ, ವಿಜಯಕುಮಾರ ಹಿರೇಮಠ,ಜಗದೀಶ ಪಾಟೀಲ್, ಪ್ರದೀಪ ಕಲ್ಯಾಣಕರ್, ವಿಜಯಕುಮಾರ ಹವಾಲ್ದಾರ್, ರವಿ ಓಕಳಿ, ರಾಜಕುಮಾರ ಕೋರವಾರ, ಅಮ್ಮಣ್ಣ, ಹೊಸಗೌಡ,ಶಿವಕುಮಾರ ಟೆಂಗಳಿ,ಕೃಷ್ಣಾ ಗುತ್ತೇದಾರ, ಅಮರೇಶ ರೋಜಾ, ಬಾಬುರಾವ ಜೋಳದಪಗೆ, ಕುಲಕರ್ಣಿ, ಚಂದ್ರಶೇಖರ, ಮಲ್ಲಪ್ಪ ಬೋಸಗಿ, ಮುರಳಿ ರತ್ನಾಗಿರಿ, ನಾಗಭೂಷಣ ಹಿಂದೊಡ್ಡಿ, ಸುಭಾಷ ನಂದ್ಯಾಳ, ಶರಣು ಕಲಬುರ್ಗಿ, ಸಿದ್ದು ಪಾಟೀಲ್, ಅಯ್ಯಪ್ಪ ನಾಗರಾಳ ಇತರರಿದ್ದರು.
ಎಂಎಸ್‌ಐ ಕಾಲೇಜು ಪ್ರಾಚಾರ್ಯ ಡಾ.ರಾಜಶೇಖರ ಬಿರನಳ್ಳಿ ಸ್ವಾಗತಿಸಿದರು.ಉದ್ಯಮಿ ಮನೀಷ್ ಜಾಜು ಪರಿಚಯಿಸಿದರು. ಎಂಆರ್‌ಎAಸಿ ಪ್ರಾಧ್ಯಾಪಕ ಡಾ.ಶ್ರೀಶೈಲ ಘೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ವಿಜ್ಞಾನಿ ಡಾ.ಡಿ.ಎಂ.ಮಣ್ಣೂರ ವಂದಿಸಿದರು. ಆರ್.ಜೆ.ಮಂಜು ಹಿರೊಳ್ಳಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net