ಶಿಸ್ತಿನಿಂದ ಅಧ್ಯಯನ ಮಾಡಿದರೆ ವಿಜಯ ಖಚಿತ

03kkr-2(2-25 kaddi mohan kps college
Published on

 ಕಿಕ್ಕೇರಿ: ಶಿಸ್ತಿನಿಂದ ಅಧ್ಯಯನ ಮಾಡಿದರೆ ವಿಜಯ ಖಚಿತ ಎಂದು ವಿಜ್ಞಾನಿ ಡಾ. ಕೆ.ಎನ್. ಮೋಹನ್ ಕಿಕ್ಕೇರಿ ತಿಳಿಸಿದರು.ಇಲ್ಲಿನ ಕೆಪಿಎಎಸ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಓದಿನ ರಹಸ್ಯ ತಿಳಿಯಿರಿ- ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಊಗಿನಹಳ್ಳಿ ಜನಿಸಿದ ನಾನು ಕಿಕ್ಕೇರಿಯಲ್ಲಿ ಪ್ರಾಥಮಿಕ, ಪೌಢಶಾಲೆ ಹಂತದ ಶಿಕ್ಷಣ ಪಡೆದೆ. ಚನ್ನರಾಯಪಟ್ಟಣದಲ್ಲಿ ಪಿಯುಸಿ ವ್ಯಾಸಂಗ ಮಾಡಿದೆ. ಯಾವುದೇ ಸೌಲಭ್ಯ ಇಲ್ಲದ ಸಣ್ಣ ಗ್ರಾಮದಿಂದ ಬಂದ ನಾನು ಪಾಠ ಮಾಡುವ ಶಿಕ್ಷಕರನ್ನೇ ಸರ್ವಸ್ವ ಎಂದು ನಂಬಿ ಅಧ್ಯಯನ ಮಾಡಿದೆ. ಇದರಿಂದ ಪಿಎಚ್‌ಡಿ ವರೆಗಿನ ಸಾಧನೆಯಾಯಿತು. ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ರಾಸಾಯನಶಾಸ್ತ್ರ ವಿಭಾಗದ ಅಧ್ಯಕ್ಷನಾಗಿ ಸೇವೆ ಮಾಡುತ್ತ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕನಾಗಿರುವುದು ಧನ್ಯತೆ ಮೂಡಿಸಿದೆ ಎಂದು ಅವರು ಸ್ವ ಅನುಭವ ಹಂಚಿಕೊಂಡರು.

ನಮ್ಮ ಸಾಧನೆಗಳು ನಾವು ಜನಿಸಿದ ಊರಿಗೆ, ಜಿಲ್ಲೆಗೆ ಮತ್ತು ನಾಡಿಗೆ ಮಾದರಿ ಆಗಬೇಕು. ನಾನು ಓದಿದ ಶಾಲೆಯಲ್ಲಿ ಈಗ ವ್ಯಾಸಂಗ ಮಾಡುತ್ತಿರುವ ಮಕ್ಕಳು ನನ್ನ ಸಾಧನೆಗಳನ್ನೂ ಮೀರಿಸಿ ಭವಿಷ್ಯದಲ್ಲಿ ಸಮಾಜಕ್ಕೆ ಬೆಳಕಾಗಬೇಕು ಎಂದು ಡಾ. ಕೆ.ಎನ್. ಮೋಹನ್ ಆಶಿಸಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಗೊಂಡ ಸಂಶೋಧನಾ ಪ್ರಬಂಧಗಳು, ಉನ್ನತ ಮಟ್ಟದ ಶೈಕ್ಷಣಿಕ ಚಟುವಟಿಕೆಗಳು, ಶ್ರೇಷ್ಠ ವಿಜ್ಞಾನಿಗಳ ಒಡನಾಟ ಇತ್ಯಾದಿಗಳನ್ನು ಅವರು ಮಕ್ಕಳಿಗೆ ವಿವರಿಸಿದರು.

ಕಷ್ಟದ ಬದುಕೇ ಪ್ರೇರಣೆ ನೀಡಿತು: ಇದೇ ಶಾಲೆಯಲ್ಲಿ ಓದಿದ ಬೆಂಗಳೂರಿನ ಪೋಲಿಸ್ ಇಲಾಖೆಯ ಡಿವೈಎಸ್‌ಪಿ ಲಕ್ಷ್ಮೇಗೌಡ ಮಾತನಾಡಿ, ಕಷ್ಟದ ಬದುಕು ಪರಿಶ್ರಮದ ಓದಿಗೆ ಪ್ರೇರೇಪಿಸಿತು ಎಂದರು. ಗ್ರಾಮೀಣ ಪ್ರದೇಶದ ಮಕ್ಕಳು ಎಲ್ಲರಿಗಿಂತಾ ಹೆಚ್ಚು ಸಾಧನೆ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net