ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ

19-kk1(6-24
Published on

ಶಾಸಕ ಎಚ್.ಟಿ. ಮಂಜು ಸಲಹೆ

ಕಿಕ್ಕೇರಿ: ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು. ಗುಂಡಿಬಿದ್ದು ಹಾಳಾಗಿದ್ದ ಮಂದಗೆರೆ - ಕಿಕ್ಕೇರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಹೆದ್ದಾರಿ ಅಭಿವೃದ್ದಿ ನಿಗಮದ ಪ್ಯಾಕೇಜ್‌ನಲ್ಲಿ ಈ ಕೆಲಸ ನಡೆಸಲಾಗುತ್ತಿದೆ. ರಸ್ತೆ ತುಂಬಾ ಹಾಳಾಗಿತ್ತು. ನಿತ್ಯ ಶಾಲಾ, ಕಾಲೇಜು ವಿದ್ಯಾರ್ಥಿಗಳು, ದ್ವಿಚಕ್ರವಾಹನ ಸವಾರರು ಈ ರಸ್ತೆಯಲ್ಲಿ ಓಡಾಡಲು ಕಷ್ಟಪಡುತ್ತಿದ್ದರು. ಮಳೆ ಬಂದರೆ ರಸ್ತೆ ಕೆಸರುಗದ್ದೆಯಾಗುವುದನ್ನು ಕಣ್ಣಾರೆ ಕಂಡಿರುವ ನಾನು ಅಭಿವೃದ್ಧಿ ಕಾಮಗಾರಿಗೆ ಕ್ರಮ ವಹಿಸಿದ್ದೇನೆ ಎಂದರು.ಒಟ್ಟು 800ಮೀ. ಉದ್ದದ ರಸ್ತೆ ಕಾಮಗಾರಿಯನ್ನು ಈಗ ಆರಂಭಿಸಲಾಗಿದೆ. ಗುಣಮಟ್ಟದ ಕಾಮಗಾರಿಗೆಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಳಜಿ ವಹಿಸಬೇಕು. ಚರಂಡಿ, ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಕೆಲಸ ನಿರ್ವಹಿಸಬೇಕು. ಸಮೀಪದ ಮಂದಗೆರೆಯಲ್ಲಿ ರೈಲು ನಿಲ್ದಾಣವಿದ್ದು, ನೂರಾರು ವಾಹನಗಳು ಹಾಗೂ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಲಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಹಾಗಾಗಿಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದವರು ತಾಕೀತು ಮಾಡಿದರು. ಮುಖಂಡ ಕೆ.ವಿ. ಅರುಣಕುಮಾರ್, ಐಕನಹಳ್ಳಿ ಕೃಷ್ಣೇಗೌಡ, ಕಾಯಿ ಮಂಜೇಗೌಡ, ಶೇಖರ್, ಮಂಜು, ಇಂಜಿನಿಯರ್ ರಾಜು, ಮಂಜುನಾಥ್, ಕೃಷ್ಣಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net