ಅಂಕನಾಥೇಶ್ವರ ದೇಗುಲದಲ್ಲಿ ವಾರ್ಷಿಕ ಪೂಜೆ

10-kkr2 ( 2-25 ankanateswara temple
Published on

ಕಿಕ್ಕೇರಿ : ಸಮೀಪದ ಬೇವಿನಹಳ್ಳಿ ಗ್ರಾಮದ ಶ್ರೀ ಅಂಕನಾಥೇಶ್ವರ ದೇಗುಲದಲ್ಲಿ ಸೋಮವಾರ ವಿಜೃಂಭಣೆಯಿಂದ ವಾರ್ಷಿಕ ಪೂಜೆ, ಹೋಮ ಹವನಾದಿಗಳು ನೆರವೇರಿದವು. 7ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಪ್ರಯುಕ್ತ ಹೇಮಾವತಿ ನದಿ ತಟದಲ್ಲಿರುವ ಅಂಕನಾಥೇಶ್ವರ, ಸುಬ್ರಹ್ಮಣ್ಯ, ಗಣಪತಿ, ನವಗ್ರಹ ದೇವರಿಗೆ ವಿಶೇಷ ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. ಬ್ರಾಹ್ಮೀ ಮುಹೂರ್ತದಲ್ಲಿ ಜರುಗಿದ ಪೂಜಾ ವಿಧಿ ವಿಧಾನಗಳಲ್ಲಿ ದೇವರುಗಳಿಗೆ ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ರುದ್ರಾಭಿಷೇಕ ಮಾಡಲಾಯಿತು. ನಂತರ ರುದ್ರ ಹೋಮ, ಮಹಾ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸೇವೆ ಏರ್ಪಡಿಸಲಾಗಿತ್ತು.

ಪುಣ್ಯಸ್ನಾನ: ಭಕ್ತರು ಹೇಮಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರು. ಹಣ್ಣು, ಕಾಯಿ ನೈವೇದ್ಯ ಸಮರ್ಪಿಸಿ ಪ್ರಸಾದ ಸ್ವೀಕಾರ ಮಾಡಿದರು. ದೇಗುಲದ ಉಸ್ತುವಾರಿ ಸಮಿತಿಯ ಮುಖ್ಯಸ್ಥರಾದ ಎಂ.ಎಸ್. ಸುಬ್ಬಕೃಷ್ಣ, ಎಂ.ಎಸ್. ರವಿ, ಎಂ.ಎಸ್. ಚಂದ್ರು, ಎಂ.ಎಸ್. ಆನಂದ್, ಎಂ.ಎನ್. ನಂಜುಂಡಸ್ವಾಮಿ, ಸಾವಿತ್ರಿ, ಅರ್ಚಕ ಶ್ರೀಕಾಂತ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net