

ಕಿಕ್ಕೇರಿ: ಹೋಬಳಿಯ ಸೊಳ್ಳೇಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರು ಜಯಭೇರಿ ಬಾರಿಸಿದರು. ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಕುಂದೂರು ವಸಂತಕುಮಾರ್ ಹಾಗೂ ಸಾಲಗಾರರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸೊಳ್ಳೇಪುರ ಸುರೇಶ್, ಕೋಡಿಮಾರನಹಳ್ಳಿ ಮಂಜೇಗೌಡ, ಬೋಜೇಗೌಡ, ರೇಖಾನಾಗರಾಜು, ಸುರೇಶ್, ನರಸಿಂಹಯ್ಯ, ಕುಂದೂರು ರಾಮಚಂದ್ರು, ಜೆಡಿಎಸ್ ಬೆಂಬಲಿತರಾದ ಮಂಜುಳಾ, ದೇವರಾಜು, ಕೃಷ್ಣೇಗೌಡ ಆಯ್ಕೆಯಾದರು.
ನೂತನವಾಗಿಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಕೆಪಿಸಿಸಿ ಸದಸ್ಯ ಸುರೇಶ್ ಅಭಿನಂದಿಸಿ ದರು. ನಂತರ ಮಾತನಾಡಿದ ಅವರು, ಸಹಕಾರ ಸಂಘ, ಹಾಲಿನ ಡೇರಿಗಳು ರೈತರ ಜೀವನಾಡಿಯಾಗಿವೆ. ಇವುಗಳ ಅಭಿವೃದ್ಧಿಗೆ ನಿರ್ದೇಶಕರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು, ಮುಖಂಡರು ಪಟಾಕಿ ಸಿಡಿ, ಸಿಹಿ ಹಂಚಿ, ವಿಜೇತರಿಗೆ ಪುಷ್ಪಮಾಲೆ ಹಾಕಿ ಸಂಭ್ರಮಿಸಿದರು. ಕೆಪಿಸಿಸಿ ಸದಸ್ಯ ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಜಯರಾಂ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀಪುರ ಚಂದ್ರೇಗೌಡ, ಗೋಪಾಲ್, ಕೃಷ್ಣೇಗೌಡ, ಆನಂದ್, ರುಕೇಶ್, ಮಹೇಶ್, ಹರೀಶ್ ಮತ್ತಿತರರು ಇದ್ದರು,