ಕೆ.ಕೆ.ರೋಡಲ್ಲಿ ಸಂಚಾರ ಸಮಸ್ಯೆ : ಪಾದಚಾರಿಗಳಿಗೆ ಧೂಳಿನ ಸಿಂಚನ : ಸ್ಥಳೀಯರಲ್ಲಿ ಆರೋಗ್ಯ ತೊಂದರೆ

New Project (1)
Published on

ಪೆರ್ಲ: ಪಾಣಾಜೆ ಅರ್ದಮೂಲೆಯಿಂದ ಕಾಟುಕುಕ್ಕೆ ಅಡ್ಕಸ್ಥಳ ಮೂಲಕ ಚೆರ್ಕಳ ಕಲ್ಲಡ್ಕ ಹೆದ್ದಾರಿ ಸಂಪರ್ಕಿಸುವ ಕೆ.ಕೆ.ರೋಡ್ (ಕಾಟುಕುಕ್ಕೆ ರಸ್ತೆ)ನಲ್ಲಿ ಧೂಳಿನ ಸಮಸ್ಯೆ ತೀವ್ರಗೊಂಡು ಸಂಕಷ್ಟ ಎದುರಾಗಿದೆ.

ರಸ್ತೆಯಲ್ಲಿ ವಾಹನಗಳು ಹಾದು ಹೋಗುವಾಗ ಹಿಂಬದಿ ವಾಹನಗಳು, ಪಾದಚಾರಿಗಳಿಗೆ ಧೂಳಿನ ಸಿಂಚನವಾಗುತ್ತಿದೆ. ಅರ್ದಮೂಲೆಯಿಂದ ಪಿಲಿಂಗಲ್ಲು ದಂಬೆಕ್ಕಾನ ತನಕದ ರಸ್ತೆ ಬದಿಯ ಮನೆಗಳಲ್ಲಿ ಧೂಳಿನಿಂದ ಕೆಮ್ಮು, ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ತಿಂಗಳು ಕಾಟುಕುಕ್ಕೆ ದೇವಳದ ಷಷ್ಠಿ ಮಹೋತ್ಸವ ಸಂದರ್ಭ ರಸ್ತೆ ಹೊಂಡಕ್ಕೆ ಮಣ್ಣು ಹಾಕಿ ಮುಚ್ಚಲಾಗಿತ್ತು. ಕರ್ನಾಟಕ ಭಾಗದ ರಸ್ತೆ ವಿಸ್ತರಣೆ ಸಂದರ್ಭದ ಮಣ್ಣು, ರಸ್ತೆಗೆ ಸಮಾಂತರವಾಗಿ ನಿರ್ಮಿಸಿದ ಹೊಸ ರಸ್ತೆಯ ಮಣ್ಣು ರಸ್ತೆಯಲ್ಲಿ ತುಂಬಿದೆ. ರಸ್ತೆ ಸಂಪೂರ್ಣ ದುರಸ್ತಿ ಸಾಧ್ಯವಾಗದಿದ್ದರೆ ಪಿಲಿಂಗಲ್ಲು ಹಾಗೂ ಕೊಲ್ಯ ಬಜಕ್ಕುರೆಯ ಹೊಂಡಗಳನ್ನಾದರೂ ಮುಚ್ಚಲು ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net