ಕಾಕತಿಯಲ್ಲಿ ಕಿತ್ತೂರು ಉತ್ಸವ

201ನೇ ವರ್ಷದ ಕಿತ್ತೂರು ಉತ್ಸವ ಸಂಭ್ರಮ (ಕಾಕತಿ) (2)
Published on

ಬೆಳಗಾವಿ: ಕಿತ್ತೂರು ಉತ್ಸವ ಮಹಿಳೆಯರ ಉತ್ಸವವಾಗಿದೆ. ರಾಣಿ ಚನ್ನಮ್ಮ ನಾಡು, ನುಡಿಗಾಗಿ ಮಾಡಿದ ಹೋರಾಟ ತ್ಯಾಗಗಳ ಬಗ್ಗೆ ತಿಳಿದುಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ರಾಣಿ ಚನ್ನಮ್ಮಳ ತವರೂರಾದ ತಾಲೂಕಿನ ಕಾಕತಿ ಗ್ರಾಮದಲ್ಲಿ 201ನೇ ವರ್ಷದ ಕಿತ್ತೂರು ಉತ್ಸವ ಪ್ರಯುಕ್ತ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಕಿತ್ತೂರು ಉತ್ಸವವು ಪ್ರತಿ ವರ್ಷ ಕಾಕತಿಯಿಂದ ಪ್ರಾರಂಭವಾಗಿ ಕಿತ್ತೂರಿನಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತದೆ. ಕೇವಲ ಉತ್ಸವವಲ್ಲದೇ, ಅಭಿವೃದ್ಧಿ ಕಾರ್ಯಗಳೂ ಆಗುತ್ತಿವೆ. ಕೆಲ ವರ್ಷಗಳಿಂದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ರಸ್ತೆ, ಕೋಟೆ ಹಾಗೂ ದ್ವಾರ ಬಾಗಿಲು ಸೇರಿ ವಿವಿಧ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಉಳಿದ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಐಎಎಸ್ ಅಕಾಡೆಮಿ ಕನ್ನಡ ಉಪನ್ಯಾಸಕ ರಾಜೀವ ಪಟೇಲ್ ಉಪನ್ಯಾಸ ನೀಡಿದರು. ಶಾಸಕ ಆಸೀಫ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆ, ಉಪವಿಭಾಗಾಧಿಕಾರಿ ಶ್ರವಣ ನಾಯಕ, ಕಾಕತಿ ಗ್ರಾಪಂ ಅಧ್ಯಕ್ಷೆ ವರ್ಷಾ ಮುಚ್ಚಂಡಿಕರ, ಉಪಾಧ್ಯಕ್ಷೆ ರೇಣುಕಾ ಕೋಳಿ, ಸಿದ್ದು ಸುಣಗಾರ, ಯಲ್ಲಪ್ಪ ಕೋಳೆಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net