ಕಿತ್ತೂರು ಉತ್ಸವಕ್ಕೆ ಐದು ಕೋಟಿ ರೂಪಾಯಿ ಅನುದಾನ

14dvk 1
Published on

ಬೆಳಗಾವಿ: ಅ.23ರಿಂದ 25ರವರೆಗೆ ನಡೆಯುವ ಕಿತ್ತೂರು ಉತ್ಸವಕ್ಕೆ ಈ ಸಲ ಐದು ಕೋಟಿ ರೂಪಾಯಿ ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಸಲವೂ ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಉತ್ಸವಕ್ಕೆ 1 ಕೋಟಿ ರೂ. ಕೊಡಲಾಗುವುದು. ಈ ಅನುದಾನ ಪ್ರತಿ ಸಲದಂತೆಯೇ ಬರುತ್ತದೆ. ಜತೆಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ 4 ಕೋಟಿ ರೂ.

ಒದಗಿಸುವ ತೀರ್ಮಾನ ಮಾಡಿದ್ದೇವೆ. ಹಣವೂ ಬಿಡುಗಡೆಯಾಗುತ್ತಿದೆ. ಉತ್ಸವಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರು ದಸರಾ ಮಾದರಿಯಲ್ಲಿಯೇ ಕಿತ್ತೂರು ಉತ್ಸವ ಮಾಡಬೇಕೆನ್ನುವುದು ಪ್ರತಿ ವರ್ಷದ ಅಭಿಲಾಷೆಯಾಗಿರುತ್ತದೆ. ಆದರೆ ಈ ಸಲವೂ ಸಿಕ್ಕ ಅನುದಾನದಲ್ಲಿ ಅದ್ದೂರಿಯಾಗಿ ಉತ್ಸವ ಮಾಡುತ್ತೇವೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಿತ್ತೂರು ಇತಿಹಾಸವನ್ನು ತಿಳಿಸುವುದಕ್ಕಾಗಿಯೇ ವಿಶೇಷವಾದ ವೇದಿಕೆಯನ್ನು ಈ ಸಲ ಸಜ್ಜು ಮಾಡುತ್ತೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾವಿದರ ಜತೆಗೆ ಪ್ರಸಿದ್ಧ ಕಲಾವಿದರನ್ನೂ ಆಹ್ವಾನಿಸಲಾಗುವುದು. ಈ ಕುರಿತಂತೆ

ಈಗಾಗಲೇ ಜಿಲ್ಲಾಡಳತದ ಜತೆಗೆ ಚರ್ಚಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net