

ಮೈಸೂರು: ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ಶ್ರೀಭುವನೇಶ್ವರಿ ಸೇವಾ ಟ್ರಸ್ಟ್‌ನಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಬುಧವಾರ ವಿವಿಧ ಗಿಡಗಳನ್ನು ನೆಟ್ಟು ಸಿಹಿ ಹಂಚಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ಎಂದರು. ಆಕೆಯ ತ್ಯಾಗ ಬಲಿದಾನ, ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಿಸಬೇಕು ಎಂದರು. ಸಾಹಸ ಮತ್ತು ತ್ಯಾಗದಿಂದ ಚನ್ನಮ್ಮ ಅಮರವಾಗಿದ್ದಾಳೆ. ಸಾವಿರಾರು ವೀರ ಯೋಧರೊಂದಿಗೆ
ಬ್ರಿಟಿಷರನ್ನು ಹಿಮ್ಮೆಟ್ಟಿಸುವ ಸಾಹಸವನ್ನು ಮಾಡಿದ್ದು ಯುವ ಜನಾಂಗಕ್ಕೆ ಆದರ್ಶವಾಗಬೇಕಿದೆ ಎಂದರು.
ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ ಮಾತನಾಡಿ, ಕಿತ್ತೂರು ಚನ್ನಮ್ಮ ಒಬ್ಬ ವೀರ ವನಿತೆ. ಆಕೆಯ ಆದರ್ಶ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ ಎಂದರು.
ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಜಗದೀಶ್, ಶ್ರೀಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷೆ ನಾಗಶ್ರೀ ಸುಚೀಂದ್ರ, ಉದ್ಯಮಿ ಅಪೂರ್ವ ಸುರೇಶ್, ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷೆ ಸವಿತಾ ಘಾಟ್ಕೆ, ಸಮಾಜ ಸೇವಕರಾದ ವಿದ್ಯಾ, ಮಂಜುನಾಥ, ವಿಘ್ನೇಶ್ವರ ಭಟ್, ಸುದರ್ಶನ, ಶ್ರೀನಿವಾಸ, ವಿನೋದ್ ಅರಸು, ಚರಣ್, ರಂಗನಾಥ, ಗೋಪಿ , ರಾಮು, ಪ್ರವೀಣ್, ಪಾಪಣ್ಣ, ಸುಕನ್ಯಾ, ಗೀತಾ, ಆದರ್ಶ, ನಾಗೇಶ್ ಇತರರು ಇದ್ದರು.