

ಕಾಗವಾಡ: ಕಿತ್ತೂರು ರಾಣಿ ಚನ್ನಮ್ಮನ ಆದರ್ಶ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ರಾಜೇಶ್ ಬುರ್ಲಿ ಹೇಳಿದರು. ಪಟ್ಟಣದಲ್ಲಿ ಕಿತ್ತೂರು ಚನ್ನಮ್ಮ ಉತ್ಸವದ ವೀರಜ್ಯೋತಿಯನ್ನು ತಾಲೂಕಾಡಳಿತದಿಂದ ಶುಕ್ರವಾರ ಅದ್ದೂರಿಯಾಗಿ ಬರಮಾಡಿಕೊಂಡು ಮಾತನಾಡಿದರು.
ಕನ್ನಡಪರ ಸಂಘಟನೆಯ ಬಸವರಾಜ ಮಗದುಮ್ಮ ಮಾತನಾಡಿ, ರಾಣಿ ಚನ್ನಮ್ಮ ನಮ್ಮ ಹೆಮ್ಮೆ ಎಂದರು.
ತಾಪಂ ಇಒ ಸುರೇಶ ಕದ್ದು, ಬಿಇಒ ಎಂ.ಆರ್.ಮುಂಜೆ, ಸಿಡಿಪಿಒ ಸಂಜಯಕುಮಾರ ಸದಲಗಿ, ಉಪತಹಸೀಲ್ದಾರ್ ಅಣ್ಣಸಾಹೇಬ ಕೋರೆ, ಸುಭಾಷ ತುಪುಳೆ, ಪ್ರಕಾಶ ಪಾಟೀಲ, ರಾಜು ಕರವ, ರಮೇಶ ಚೌಗಲೆ, ಬಸವರಾಜ ಮಗದುಮ್, ಮಹಾವೀರ ಪಾಟೀಲ, ಬಾಳು ಕೋರೆ ಇತರರಿದ್ದರು.