ವಾಯುವ್ಯ ಸಾರಿಗೆ ಹೆಸರನ್ನು ಕಿತ್ತೂರು ಕರ್ನಾಟಕ ಸಾರಿಗೆ ಎಂದು ನಮೂದಿಸಲು ಮನವಿ

IMG-20250325-WA0008_1-1.jpg
Published on

ಹುಬ್ಬಳ್ಳಿ: ರಾಜ್ಯ ಸರ್ಕಾರ ಕಿತ್ತೂರು ವಿಭಾಗವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಿದ್ದು ಅದು ಜಾರಿಗೆ ಬರುವಲ್ಲಿ ವಿಳಂಬವಾಗುತ್ತಿದೆ. ಈ ದಿಸೆಯಲ್ಲಿ ಈ ಭಾಗದ ಸರ್ಕಾರಿ ಸಂಸ್ಥೆಗಳ ಹೆಸರು ಬದಲಾವಣೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳು ಮನವಿ ಮಾಡಿವೆ.

ಆಡಳಿತದ ಎಲ್ಲ ಹಂತದಲ್ಲಿ ಕಿತ್ತೂರು ಕರ್ನಾಟಕ ಎಂದು ನಮೂದಿಸಬೇಕು. ಇಲ್ಲಿಯ ವಾಯುವ್ಯ ಸಾರಿಗೆ ಸಂಸ್ಥೆಯ ಹೆಸರನ್ನು ಕಿತ್ತೂರು ಕರ್ನಾಟಕ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಗೊಳಿಸಲು ಕನ್ನಡ ಪರ ಚಳುವಳಿಗಾರ ಗಂಗಾಧರ ದೊಡ್ಡವಾಡ ಕೋರಿದ್ದಾರೆ.

ಹುಬ್ಬಳ್ಳಿಯಲ್ಲಿರುವ ವಾಯುವ್ಯ ಸಾರಿಗೆ ಸಂಸ್ಥೆಯ ಕಚೇರಿಗೆ ತೆರಳಿದ ಸಂಘಟನೆಯ ಮುಖಂಡರು ನಿರ್ದೇಶಕಿ ಪ್ರಿಯಾಂಗ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಇಂಟೆಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಾರುಖಾನ್ ಮುಲ್ಲಾ, ದತ್ತುಸಾ ಪವಾರ,  ಅಬ್ದುಲ್ ಹುಡೇದ, ಮಂಜುನಾಥ ಬಿಂಗಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net