

ಬೈಲಹೊಂಗಲ: ಒಳ್ಳೆಯ ಮನಸ್ಸು ಇರುವ ಕಡೆಗೆ ದೇವರು&ಜನರ ಆಶೀರ್ವಾದ ಇರುತ್ತದೆ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದ ಆವರಣದಲ್ಲಿ ಮಂಗಳವಾರ ತಮ್ಮ 53ನೇ ಜನ್ಮದಿನ ನಿಮಿತ್ತ ಅಭಿಮಾನಿಗಳು, ಸಾರ್ವಜನಿಕರು, ಗ್ರಾಮಸ್ಥರು ಏರ್ಪಡಿಸಿದ್ದ ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ನೋಟಬುಕ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವೆ. ಇನ್ನೂ ಮೂರು ವರ್ಷ ಅವಧಿ ಇದ್ದು ಕ್ಷೇತ್ರವನ್ನು ಮಾದರಿ ಮಾಡುವತ್ತ ಪ್ರಯತ್ನ ಮಾಡುವೆ. ನಾನು ಸೋತಾಗ&ಗೆದ್ದಾಗ ಜತೆಗಿದ್ದ ಯುವಕರು, ಹಿರಿಯರು ಮತ್ತು ೇತ್ರದ ಜನರನ್ನು ಎಂದಿಗೂ ಮರೆಯಲಾರೆ ಎಂದರು.
ಯುವ ಧುರೀಣ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ಬಾಬಾಸಾಹೇಬರು ಮೊದಲ ಬಾರಿಗೆ ಶಾಸಕರಾಗಿದ್ದರೂ ಅವರಿಗೆ 20 ವರ್ಷಗಳಿಂದ ಸಾರ್ವಜನಿಕ ಸೇವೆಯ ಅನುಭವ ಇದೆ. ಈ ಕಾರಣದಿಂದ ಚನ್ನಮ್ಮನ ಕಿತ್ತೂರು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತಿದೆ ಎಂದರು. ಶಾಸಕ ಬಾಸಾಸಾಹೇಬ ಪಾಟೀಲ ಅವರ ಪತ್ನಿ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ನನ್ನ ಮಾವನವರಾದ ದಿ.ದೇವನಗೌಡ್ರು ಪಾಟೀಲ ತಮ್ಮ ಜೀವನವನ್ನೇ ಸಮಾಜ ಸೇವೆಗೆ ಅರ್ಪಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂದರು. ನೇಗಿನಹಾಳ ಸಿದ್ಧಾರೂಢ ಮಠದ ಅದ್ವೆ$$ೃತಾನಂದ ಸ್ವಾಮೀಜಿ, ಹುಣಶೀಕಟ್ಟಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು, ತುರಮರಿಯ ಶಾಂತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನ