

ತಾಳಿಕೋಟೆ: ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಮಹಾನ್ ರಾಷ್ಟ್ರಭಕ್ತೆ. ಅವರ ನಡೆ, ನುಡಿಯನ್ನು ನಾವೆಲ್ಲರೂ ಅನುಕೀರ್ತಿ ಚಾಲಕಕರಣೆ ಮಾಡಿದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪರಗಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತದ ನೇತೃತ್ವದಲ್ಲಿ ಬುಧವಾರ ಆಯೋಜಿಸಿದ್ದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮನ 246ನೇ ಜಯಂತಿ ಹಾಗೂ 200ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶ ಸುಂದರ ಹಾಗೂ ಸುಸಜ್ಜಿತವಾಗಲು ಅನೇಕ ಮಹಾಪುರುಷರ ಹೋರಾಟ, ಬಲಿದಾನ ಸ್ಮರಣೀಯವಾಗಿದೆ. ಪಠ್ಯ ಪುಸ್ತಕಗಳಲ್ಲಿನ ವೀರ ಮಹಾಪುರುಷರ ಜೀವನ ಚರಿತ್ರೆ ಕುರಿತು ವಿಸ್ತೃತವಾಗಿ ವಿವರಿಸುವಂತಹ ಕಾರ್ಯವಾಗಬೇಕು. ಇದರಿಂದ ಯುವಜನತೆಯಲ್ಲಿ ರಾಷ್ಟ್ರಭಕ್ತಿ ತುಂಬಲು ಸಾಧ್ಯವಾಗಲಿದೆ. ಪಾಲಕರು ಕೂಡ ಮನೆಯಲ್ಲಿ ಮಕ್ಕಳಿಗೆ ಮಹಾ ಪುರುಷರ ಕಥೆಗಳನ್ನು ವಿವರಿಸಬೇಕು ಎಂದರು.
ತಹಸೀಲ್ದಾರ್ ಕೀರ್ತಿ ಚಾಲಕ ಮಾತನಾಡಿದರು. ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಎಸ್.ಕಾರ್ಚಿ, ಜಗದೀಶ ಬಿಳೇಭಾವಿ, ಕಾಶಿನಾಥ ಮುರಾಳ, ಪ್ರಭು ಬಿಳೇಭಾವಿ, ನಿಂಗರಾಜ ಕುಂಟೋಜಿ, ಕಾಶಿನಾಥ ಪರಂಪುರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಆರ್.ಎಲ್.ಕೊಪ್ಪದ, ಅಶೋಕ ಚಿನಗುಡಿ, ಬಸನಗೌಡ ಪಾಟೀಲ, ಕುಮಾರಗೌಡ ಪಾಟೀಲ, ಲಂಕೇಶ ಪಾಟೀಲ, ಡಿ.ಕೆ.ಪಾಟೀಲ, ಮಲ್ಲನಗೌಡ ಪಾಟೀಲ, ಮುರುಗೇಶ ಕೋರಿ, ಪುರಸಭೆಯ ಕಂದಾಯ ಅಧಿಕಾರಿ ಸುರೇಶ ಅಮರಣ್ಣವರ, ಡಾ.ಶ್ರೀಶೈಲ ಹುಕ್ಕೇರಿ ಇತರರಿದ್ದರು.