ಮಾ.18ಕ್ಕೆ ಕಿತ್ತೂರು, ಬೈಲಹೊಂಗಲ ಬಂದ್​

14blh1 ಬೈಲಹೊಂಗಲ ಬಂದ ನ್ಯೂಜ್
Published on

ಬೈಲಹೊಂಗಲ: ಬಜೆಟ್​ನಲ್ಲಿ ಕಿತ್ತೂರು ಪ್ರಾಧಿಕಾರದ ಅಭಿವೃದ್ಧಿಗೆ ಯಾವುದೇ ಅನುದಾನ ೂಷಣೆ ಮಾಡದಿರುವ ರಾಜ್ಯ ಸರ್ಕಾರದ ತಾರತಮ್ಯ ಖಂಡಿಸಿ ಮಾ.18ಕ್ಕೆ ಕಿತ್ತೂರು, ಬೈಲಹೊಂಗಲ ತಾಲೂಕು ಬಂದ್​ ಮಾಡುವುದಾಗಿ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ನಿರೀಣಾ ಮಂದಿರದಲ್ಲಿ ಬೈಲಹೊಂಗಲ, ಕಿತ್ತೂರು ಬಂದ್​ ಕರೆಗಾಗಿ ಗುರುವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ ಸಂಗ್ರಾಮದ ಬೆಳ್ಳಿಚುಕ್ಕಿ ವೀರಮಾತೆ ಕಿತ್ತೂರು ಚನ್ನಮ್ಮಾಜಿ ಒಬ್ಬ ದಿಟ್ಟ ಹೋರಾಟಗಾರ್ತಿ, ಬ್ರಿಟಿಷರಿಗೆ ನಡುಕ ಹುಟ್ಟಿಸಿ ಸೋಲಿನ ರುಚಿ ತೋರಿಸಿದ ಮೊಟ್ಟ ಮೊದಲ ಸ್ವತಂತ್ರ ಹೋರಾಟದ ರಾಣಿ. ಅಂತಹ ಧೀರ ಮಹಿಳೆಯ ಜನ್ಮಭೂಮಿ ಕಾಕತಿ, ಕರ್ಮಭೂಮಿ ಕಿತ್ತೂರು, ಐಕ್ಯಭೂಮಿ ಬೈಲಹೊಂಗಲ ಸೇರಿದಂತೆ 30 ಸ್ಥಳಗಳ ಅಭಿವೃದ್ಧಿಗಾಗಿ 17 ವರ್ಷಗಳ ಹಿಂದೆ ಜಾರಿಗೆ ಬಂದಿರುವ ಕಿತ್ತೂರು ಪ್ರಾಧಿಕಾರಕ್ಕೆ ಇಲ್ಲಿಯವರೆಗೆ 43 ಕೋಟಿ 75 ಲ ರೂ. ಅನುದಾನ ನೀಡಲಾಗಿದ್ದು, 9 ವರ್ಷಗಳ ಹಿಂದೆ ಜಾರಿಗೆ ಬಂದಿರುವ ಸಂಗೊಳ್ಳಿ ಪ್ರಾಧಿಕಾರಕ್ಕೆ 350 ಕೋಟಿ ಅನುದಾನ ನೀಡುವುದರ ಮೂಲಕ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಅಲ್ಲದೆ ಹೋರಾಟಗಾರರ ಮಧ್ಯೆಯು ಜಾತಿಯತೆ ತೋರುತ್ತಾ, ತಾಯಿ, ಮಗನ ಸಂಬಂಧಗಳ ಮಧ್ಯೆ ಕೊಳ್ಳಿ ಇಡ್ಟಿದ್ದಾರೆ ಎಂದು ಆರೋಪಿಸಿದರು.

ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಮುಖ್ಯಮಂತ್ರಿಗಳು ಅನುದಾನದ ವಿಷಯದಲ್ಲಿ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ರಾಯಣ್ಣನವರನ್ನು ನಾವೆಲ್ಲರೂ ಗೌರವಿಸುತ್ತೇವೆ, ಸಂಗೊಳ್ಳಿ ಪ್ರಾಧಿಕಾರಕ್ಕೆ ಈಗಾಗಲೇ ಸಾಕಷ್ಟು ಅನುದಾನ ನೀಡಿದ್ದಾರೆ. ಅದರಂತೆಯೇ ಕಿತ್ತೂರು ಪ್ರಾಧಿಕಾರದ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುದಾನದ ವಿಷಯದಲ್ಲಿ ಜಾತೀಯತೆ ಮಾಡುವುದಿಲ್ಲ ಎಂಬುದನ್ನು ನಿರೂಪಿಸಬೇಕಿದೆ ಎಂದರು.

ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯ ಶ್ರೀಶೈಲ ಬೋಳನ್ನವರ, ಶಂಕರ ಮಾಡಲಗಿ, ಉದ್ಯಮಿ ವಿಜಯ ಮೆಟಗುಡ್ಡ, ವಕೀಲ ಎಫ್​.ಎಸ್​.ಸಿದ್ದನಗೌಡರ, ಬಿ. ಎಂ.ಚಿಕ್ಕನಗೌಡರ ಮಾತನಾಡಿ, ಬಂದ್​ ಯಶಸ್ಸಿಗೆ ಎಲ್ಲರೂ ಶ್ರಮಿಸೋಣ ಎಂದರು.

ನಂತರ ಪಾದಯಾತ್ರೆಯ ಮೂಲಕ ಸಾಗಿ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ವೇ. ಮೂ.ಮಹಾಂತಯ್ಯ ಆರಾದ್ರಿಮಠ, ಬಸವರಾಜ ಜನ್ಮಟ್ಟಿ, ಚನ್ನಮ್ಮಾಜಿ ಸ್ಮರಣೋತ್ಸವ ಸಮಿತಿ ಅಧ್ಯ ಮುರಿಗೆಪ್ಪ ಗುಂಡ್ಲೂರ, ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ವಕೀಲ ಎಂ.ವೈ.ಸೋಮಣ್ಣವರ, ಮುಖಂಡ ಗುರು ಮೆಟಗುಡ್ಡ, ಮಡಿವಾಳಪ್ಪ ಹೋಟಿ, ಮಹಾಬಳೇಶ್ವರ ಬೋಳನ್ನವರ, ಚಂದ್ರಶೇಖರ ಕೊಪ್ಪದ, ಗಂಗಪ್ಪ ಗುಗ್ಗರಿ, ನಿಂಗಪ್ಪ ಚೌಡನ್ನವರ, ಮಾಜಿ ಸೈನಿಕರ ಸಂದ ಅಧ್ಯ ಬಿ.ಬಿ. ಬೋಗೂರ, ಬಿ.ಬಿ.ಸಂಗನಗೌಡರ, ಶ್ರೀಕಾಂತ ಮಾಳಕನ್ನವೆ, ಶ್ರೀಕಾಂತ ಶಿರಹಟ್ಟಿ, ಮಲ್ಲಿಕಾರ್ಜುನ ಕರಡಿಗುದ್ದಿ, ಮಲ್ಲಿಕಾರ್ಜುನ ವಕ್ಕುಂದ, ಶಿವಪ್ರಸಾದ ಪಾಟೀಲ, ರಿತೇಶ ಪಾಟೀಲ ಸೇರಿ ಚನ್ನಮ್ಮಾಜಿ ಅಭಿಮಾನಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net