ಕಿತ್ತೂರು ಚನ್ನಮ್ಮ ಕನ್ನಡಿಗರ ಅಸ್ಮಿತೆಯ ಪ್ರತೀಕ

24-msk-1
ಮಸ್ಕಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮಳ ದಿನಾಚರಣೆ ಆಚರಿಸಲಾಯಿತು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಅಪ್ಪಾಜಿಗೌಡ ಪಾಟೀಲ, ಮಲ್ಲಯ್ಯ ಬಳ್ಳಾ, ಅಮರಪ್ಪ ಗುಡದೂರು, ಕೃಷ್ಣ ಚಿಗರಿ ಇತರರು ಇದ್ದರು.
Published on

ಮಸ್ಕಿ: ಬ್ರೀಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ ಕನ್ನಡಿಗರ ಪ್ರತಿನಿಧಿಯಾಗಿ ಅಸ್ಮೀತೆಯನ್ನು ಮೆರೆದಿದ್ದಾಳೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮಳ ಭಾವಚಿತ್ರಕ್ಕೆ ಸೋಮವಾರ ಮಾಲಾರ್ಪಣೆ ಮಾಡಿ ಮಾತನಾಡಿದರು. ಈಗಿನ ಯುವ ಪೀಳಿಗೆ ಚನ್ನಮ್ಮಳ ಆದರ್ಶ, ಕಿಚ್ಚು, ಹೋರಾಟ ಮನೋಭಾವ ಬೆಳಸಿಕೊಳ್ಳಬೇಕಾಗಿದೆ. ಸ್ವಾತಂತ್ರೃಕ್ಕಾಗಿ ಹೋರಾಡಿ ಮಡಿದ ವೀರರನ್ನ ಸ್ಮಾರಿಸಬೇಕು ಎಂದರು.

ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ ಅರಮನೆ ಸುಧಾ ಅವರನ್ನು ಗೌರವಿಸಲಾಯಿತು. ಮಾಜಿ ಶಾಸಕ ಪ್ರತಪಾಗೌಡ ಪಾಟೀಲ, ಪ್ರಮುಖರಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಅಪ್ಪಾಜಿಗೌಡ ಪಾಟೀಲ, ಅಭಿಜಿತ್ ಪಾಟೀಲ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ಮುದ್ದಾಪುರ,

ಶ್ರೀಶೈಲಪ್ಪ ಬ್ಯಾಳಿ, ಹನುಮಂತಪ್ಪ ವೆಂಕಟಾಪುರ, ಪಂಚಮಸಾಲಿ ಸಮಾಜದ ಪ್ರಮುಖರಾದ ಮೌನೇಶ ತಾತ ಜಂಗಮರಹಳ್ಳಿ, ಚಿನ್ನನಗೌಡ ಗೋನಾಳ, ಅಮರಪ್ಪ ಅಂಗಡಿ, ಅಮರಪ್ಪ ಗುಡದೂರು, ಬಸವರಾಜ ನಾಯಿಕೊಡೆ, ಸುರೇಶ ಪಲ್ಲೇದ, ಶರಣಬಸವ ಗೋನಾಳ, ಕೃಷ್ಣ ಚಿಗರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net