

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕಿಟೆಲ್ ಕಲಾ, ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಕಲಾ ವಿಭಾಗದಲ್ಲಿ ಕೆ. ಭೀಮೇಶ ಶೇ. 93.83 ಅಂಕ ಪಡೆದು ಪ್ರಥಮ, ನಿಶ್ಮಿತಾ ಹೆಡೆನ್ನವರ ಶೇ. 91.33 ದ್ವಿತೀಯ, ಜುಹಾ ಮನಿಯಾರ ಶೇ. 87.83 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾಳೆ. ಸೋನಿಯಾ ನದಾಫ ಶೇ. 87, ಆದಿತ್ಯಾ ಕುಲಕರ್ಣಿ ಶೇ. 86.33, ಗುಲಾಬಿ ಹುಡೇದ ಶೇ. 85.50 ಅಂಕ ಪಡೆದಿದ್ದಾಳೆ.
ವಾಣಿಜ್ಯ ವಿಭಾಗದಲ್ಲಿ ಪ್ರಫುಲ್ ಮಾಲಗೌಡರ ಶೇ. 94.83 ಅಂಕ ಪಡೆದು ಪ್ರಥಮ, ಐಶ್ವರ್ಯ ಅಗಸಿಂಡಿ ಶೇ. 92.50 ದ್ವಿತೀಯ, ವಂದನಾ ಹುಲಕಣ್ಣವರ ಶೇ. 91 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ದಾಕ್ಷಾಯಣಿ ರಾಯಭಾಗಕರ ಶೇ. 89.33, ಭಾಗ್ಯಶ್ರೀ ಬೆಳ್ಳಿಗಟ್ಟಿ ಶೇ. 87.50, ಅಮೂಲ್ಯ ರಾಯ್ಕರ ಶೇ. 86.33 ಅಂಕ ಪಡೆದಿದ್ದಾಳೆ. ಸಾಧಕ ವಿದ್ಯಾರ್ಥಿಗಳನ್ನು ಬಾಸೆಲ್ ಮಿಶನ್ ಉಚ್ಚ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.