ಸಾಂಬಾರ್ ಪಾತ್ರೆ ಬಿದ್ದು ಅಡುಗೆ ಸಹಾಯಕಿಗೆ ಗಾಯ

MND
Published on

ಮುಂಡಗೋಡ: ಬಿಸಿ ಸಾಂಬಾರ್ ಪಾತ್ರೆ ಎತ್ತಿಕೊಂಡು ಬರುವ ವೇಳೆ ಕಾಲುಜಾರಿ ಸಾಂಬಾರ್ ಪಾತ್ರೆ ಮೈಮೇಲೆ ಬಿದ್ದ ಪರಿಣಾಮ ಅಡುಗೆ ಸಹಾಯಕಿಯೊಬ್ಬರು ಗಾಯಗೊಂಡ ಘಟನೆ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಪ್ರೌಢಶಾಲಾ ವಿಭಾಗದಲ್ಲಿ ಶನಿವಾರ ನಡೆದಿದೆ.

ಅನ್ನಪೂರ್ಣಾ ಹುಳ್ಯಾಳ (49) ಗಾಯಗೊಂಡ ಅಡುಗೆ ಸಹಾಯಕಿ. ಶನಿವಾರ ಮಧ್ಯಾಹ್ನದ ಬಿಸಿಯೂಟ ತಯಾರಿ ಮಾಡಿ ಅನ್ನಪೂರ್ಣಾ ಹಾಗೂ ಇನ್ನೊಬ್ಬ ಅಡುಗೆ ಸಹಾಯಕಿ ಪಾರ್ವತಿ ಸೇರಿ ಶಾಲೆಯಲ್ಲಿ ಬಿಸಿ ಸಾಂಬಾರ್ ತಯಾರಿಸಿ ಊಟ ನೀಡುವ ಸ್ಥಳಕ್ಕೆ ಪಾತ್ರೆಯನ್ನು ಎತ್ತಿಕೊಂಡು ಬರುವ ಸಮಯದಲ್ಲಿ ಅನ್ನಪೂರ್ಣಾ ಅವರ ಕಾಲು ಜಾಾರಿ ಸಾಂಬಾರ್ ತುಂಬಿದ್ದ ಪಾತ್ರೆ ಮೈಮೇಲೆ ಬಿದ್ದ ಪರಿಣಾಮ ದೇಹದ ಶೇ.50 ರಷ್ಟು ಭಾಗ ಸುಟ್ಟಿದೆ. ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ಕರೆದೊಯ್ಯುಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net