ಸೇವೆ ಮಾಡುವವರು ದೇವ ಸ್ವರೂಪಿ :ಈಶ್ವರ್ ಮಲ್ಪೆ ಅಭಿಪ್ರಾಯ

New Project (28)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ದೇವರ ಸೂಚನೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ. ಕಷ್ಟದಲ್ಲಿರುವವರ ಸೇವೆ ಮಾಡುವವರು ದೇವ ಸ್ವರೂಪಿಗಳು ಎಂದು ಜೀವರಕ್ಷಕ ಈಶ್ವರ್ ಮಲ್ಪೆ ಹೇಳಿದರು.

ತೊಕ್ಕೊಟ್ಟಿನ ಸಾಯಿ ಪರಿವಾರ್ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಅಂಬಿಕಾ ರಸ್ತೆಯಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ಭಾನುವಾರ ಅಶಕ್ತ 200 ಕುಟುಂಬಗಳಿಗೆ ದೀಪಾವಳಿ ಆಹಾರ ಸಾಮಗ್ರಿ ಕಿಟ್ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾರುತಿ ಜನಸೇವಾ ಸಂಘದ ಮಾಜಿ ಅಧ್ಯಕ್ಷ ವರದರಾಜ್ ಬಂಗೇರ ಮಾತನಾಡಿ, ಅನ್ನದಾನ, ವಿದ್ಯಾದಾನ, ರಕ್ತದಾನದಷ್ಟೇ ಜೀವದಾನ ಶ್ರೇಷ್ಠದಾನ. ಅಂತಹ ಸೇವೆ ಮಾಡುತ್ತಿರುವ ಈಶ್ವರ್ ಉಳ್ಳಾಲ್, ಸಾಯಿ ಪರಿವಾರ ಟ್ರಸ್ಟ್ ಸೇವೆ ಶ್ಲಾಘನೀಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮಂಡಲ ಮಾಜಿ ಅಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್, ಉದ್ಯಮಿಗಳಾದ ಪ್ರಕಾಶ್, ಗಣೇಶ್ ಅಂಚನ್, ಚಲನಚಿತ್ರ ನಟ ಸ್ವರಾಜ್ ಶೆಟ್ಟಿ, ಪ್ರಾಣಾಸ್ತ್ರ ಟ್ರಸ್ಟ್ ಅಧ್ಯಕ್ಷ ಲಾಂಚೂಲಾಲ್ ಕೆ.ಎಸ್., ಬರ್ಕೆ ಫ್ರೆಂಡ್ಸ್ ಸ್ಥಾಪಕ ಯಜ್ಞೇಶ್ ಬರ್ಕೆ, ಉದ್ಯಮಿ ಪುರುಷೋತ್ತಮ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು. ಧನಲಕ್ಷ್ಮೀ ಗಟ್ಟಿ ಸ್ವಾಗತಿಸಿದರು. ರಜನೀಶ್ ನಾಯಕ್ ವಂದಿಸಿದರು. ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.

ನಿಸ್ವಾರ್ಥ ಕೆಲಸ ಮಾಡುತ್ತಾ ಹೋದವರನ್ನು ಸಮಾಜ ಉನ್ನತಿಗೇರಿಸುತ್ತಾ ಹೋಗುತ್ತದೆ. ಪ್ರಶಸ್ತಿಗಾಗಿ ಕೆಲಸ ಮಾಡಬೇಕಿಲ್ಲ. ನಾವು ಮಾಡುವ ಕೆಲಸ ಪ್ರಶಸ್ತಿಯತ್ತ ಕೊಂಡೊಯ್ಯುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಕಷ್ಟು ಯೋಜನೆಗಳಿದ್ದು ಜನಸಾಮಾನ್ಯರಿಗೆ ತಲುಪಿಸಲು ಸಂಘ ಸಂಸ್ಥೆಗಳ ಅವಶ್ಯಕತೆಯಿದೆ. ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷ https://www.vijayavani.net/brahmakalashotsava-pre-meeting-at-puttige https://www.vijayavani.net/kanchi-swamijis-visit-to-katili

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net