ಡ್ರಗ್ಸ್​ ದಂಧೆ ಪ್ರಕರಣ: ಡ್ಯಾನ್ಸರ್​ ಕಿಶೋರ್​ ಶೆಟ್ಟಿ ಸ್ನೇಹಿತೆ ಕುರಿತು ಸ್ಫೋಟಕ ಮಾಹಿತಿ ಬಹಿರಂಗ..!

Kishore
Published on

ಮಂಗಳೂರು: ಮಾದಕ ವಸ್ತು ಜಾಲ ಪ್ರಕರಣದಲ್ಲಿ ಈಗಾಗಲೇ ಬಾಲಿವುಡ್​ ಡ್ಯಾನ್ಸರ್​ ಕಿಶೋರ್​ ಅಮನ್​ ಶೆಟ್ಟಿಯ ಬಂಧನವಾಗಿದ್ದು, ವಿಚಾರಣೆಯ ವೇಳೆ ಸಾಕಷ್ಟು ಮಹತ್ವದ ಸಂಗತಿಗಳು ಬಯಲಿಗೆ ಬರುತ್ತಿದ್ದೆ. ಇದೀಗ ಕಿಶೋರ್​ ಸ್ನೇಹಿತೆ ಕುರಿತು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಕಿಶೋರ್​ ಸ್ನೇಹಿತೆಯಾಗಿರುವ ಆಸ್ಕಾ ಸಹ ಸಿಸಿಬಿ ಅಧಿಕಾರಿಗಳಿಂದ ಬಂಧನವಾಗಿದ್ದಾಳೆ. ಮಣಿಪುರ ಮೂಲದ ಆಸ್ಕಾ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಳು. ಆ ಬಳಿಕ ಕೆಲ ವರ್ಷಗಳಿಂದ ಮಂಗಳೂರಿನಲ್ಲಿ ವಾಸವಿದ್ದಳು.

ಹಗಲು ವೇಳೆ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ, ರಾತ್ರಿ ಮಂಗಳೂರಿನ ಪಬ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಕಿಶೋರ್​ ಶೆಟ್ಟಿಯ ಪರಿಚಯವಾದ ಬಳಿಕ ಡ್ರಗ್ಸ್ ಪಾರ್ಟಿಗಳಿಗೆ ಪ್ರವೇಶ ನೀಡುತ್ತಿದ್ದಳು ಎನ್ನಲಾಗಿದೆ. ಡ್ರಗ್ ಟೆಸ್ಟ್ ಮಾಡಿಸಿದಾಗಲೂ ಪಾಸಿಟಿವ್ ಬಂದಿತ್ತು ಎಂದು ತಿಳಿದುಬಂದಿದೆ.

ಆಸ್ಕಾ ಕಿಶೋರ್​ ಗರ್ಲ್​ಫ್ರೆಂಡ್​ ಎನ್ನಲಾಗಿದ್ದು, ಆಕೆ ತನ್ನ ಇತರೆ ಫ್ರೆಂಡ್ಸ್​ಗಳನ್ನು ಡ್ರಗ್ಸ್​ ಪಾರ್ಟಿಗಳಿಗೆ ಕರೆತರುತ್ತಿದ್ದಳು ಎಂಬುದು ಬಹಿರಂಗವಾಗಿದ್ದು, ಇದೀಗ ಸಿಸಿಬಿ ಅಧಿಕಾರಿಗಳು ಆಸ್ಕಾ ಫ್ರೆಂಡ್ಸ್​ಗೂ ನೋಟಿಸ್​ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net