ಹತ್ಯೆ ಆರೋಪಿಗಳಿಗೆ ಪೊಲೀಸ್ ಕಸ್ಟಡಿ

murder
Published on

ಉಡುಪಿ: ಹಿರಿಯಡ್ಕ ಪೇಟೆಯಲ್ಲಿ ಸೆ.24ರಂದು ಹಾಡಹಗಲೇ ನಡೆದಿದ್ದ ರೌಡಿಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಐವರು ಆರೋಪಿಗಳಿಗೆ ನ್ಯಾಯಾಲಯ ಐದು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.

ಮಂಗಳೂರು ಜೋಕಟ್ಟೆ, ತೋಕೂರು ನಿವಾಸಿ ಮನೋಜ್ ಕುಲಾಲ್ ಅಲಿಯಾಸ್ ಮನೋಜ್ ಕೋಡಿಕೆರೆ (37) ಮತ್ತು ಕಾಟಿಪಳ್ಳ, ಕೃಷ್ಣಾಪುರ ನಿವಾಸಿ ಚಿತ್ತರಂಜನ್ ಪೂಜಾರಿ(27),

ಬಂಟ್ವಾಳದ ರೊಟ್ಟಿಗುಡ್ಡೆ ಹೌಸ್ ಚೇತು ಪಡೀಲ್(32), ಸಂಗಬೆಟ್ಟು ನಿವಾಸಿ ರಮೇಶ್ ಪೂಜಾರಿ(38) ಹಾಗೂ ಕಾಟಿಪಳ್ಳ ಬಾಜಾವ ನಿವಾಸಿ ದೀಕ್ಷಿತ್ ಶೆಟ್ಟಿ(29) ಇವರನ್ನು ಶನಿವಾರ ಬಂಧಿಸಲಾಗಿದ್ದು, ರಾತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net