ಕಿಶನ್‌ಗೆ ಮುಖ್ಯಮಂತ್ರಿಗಳ ಪ್ರಶಂಸಾ ಪದಕ

Kishan
Published on

ಕುಶಾಲನಗರ:

ಕುಶಾಲನಗರ ತಾಲೂಕು ಹುಲುಸೆ ಗ್ರಾಮದ ಎನ್‌ಸಿಸಿ ಕೆಡೆಟ್ ಕ್ಯಾ. ಹೆಚ್.ಎಸ್. ಕಿಶನ್ ಎನ್.ಸಿ.ಸಿ.ಯಲ್ಲಿ ತೋರಿರುವ ವಿಶೇಷ ಸಾಧನೆಗಳಿಗಾಗಿ ಮುಖ್ಯಮಂತ್ರಿಗಳ ಪ್ರಶಂಸಾ ಪದಕ ಪಡೆದಿದ್ದಾರೆ. ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿAಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿAಗ್‌ನಲ್ಲಿ ಬಿಇ ವಿದ್ಯಾರ್ಥಿಯಾಗಿರುವ ಎಚ್.ಎಸ್. ಕಿಶನ್ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಗೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಮುಖ್ಯಮಂತ್ರಿಗಳ ಪ್ರಶಂಸೆ ದೊರೆತಿದೆ.

ಈ ಪ್ರಶಸ್ತಿಯನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮುಖ್ಯಮಂತ್ರಿಗಳ ಪರವಾಗಿ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಪ್ರದಾನ ಮಾಡಿದರು.

ಕಿಶನ್ ಕುಶಾಲನಗರ ತಾಲೂಕು ಹೆಬ್ಬಾಲೆ ಗ್ರಾಪಂ ಸದಸ್ಯರೂ ಆಗಿರುವ ಹುಲುಸೆ ಗ್ರಾಮದ ಪ್ರಗತಿಪರ ಕೃಷಿಕ ಹೆಚ್.ಎನ್. ಶಿವನಂಜಪ್ಪ (ಮಹೇಶ್) ಸರಿತಾ ದಂಪತಿ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net