ಕಿಸಾನ್​ ಸಮೃದ್ಧಿ ಕೇಂದ್ರಗಳ ಉದ್ಘಾಟನೆ

27GDG06
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜರುಗಿದ ಪ್ರಧಾನಮಂತ್ರಿ ಕಿಸಾನ್​ ಸಮೃದ್ಧಿ ಕೇಂದ್ರಗಳ ಉದ್ಘಾಟನೆ ಕಾರ್ಯಕ್ರಮವನ್ನು ಎಸ್​.ವಿ, ಸಂಕನೂರು ಉದ್ಘಾಟಿಸಿದರು. ಅನಿಲ ಅಬ್ಬಿಗೇರಿ, ಎಂ. ಎಸ್​. ಕರೀಗೌಡ್ರ, ಬೂದಪ್ಪ ಹಳ್ಳಿ, ಭೀಮಸಿಂಗ್​ ರಾಠೋಡ, ಪ್ರಭು ಕಲ್ಬಂಡಿ, ನಿಂಗಪ್ಪ ಹಂಚಿನಾಳ, ಮಲ್ಲೇಶ ಕರಿಬಿಷ್ಠಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಬಿಜೆಪಿ ಗದಗ ನಗರ ಮಂಡಲ ರೈತ ಮೋರ್ಚಾ ವತಿಯಿಂದ ಗುರುವಾರ ಪ್ರಧಾನಮಂತ್ರಿ ಕಿಸಾನ್​ ಸಮೃದ್ಧಿ ಕೇಂದ್ರಗಳ ಉದ್ಘಾಟನೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ, ರೈತನಿಗೆ ಸಿಗಬೇಕಾದ ಹಲವು ಯೋಜನೆಗಳು ಒಂದೇ ಕೇಂದ್ರದಲ್ಲಿ ಸಿಗುವಂತ ಮಹತ್ವದ ಯೋಜನೆ ಇದಾಗಿದೆ. ಸ್ವಾತಂತ್ರ್ಯ ಭಾರತದ 75 ವರ್ಷದಲ್ಲಿ 50 ವರ್ಷ ಕಾಂಗ್ರೆಸ್​ ಪ ಆಡಳಿತ ನಡೆಸಿದರೂ ಕೂಡ ರೈತರಿಗೆ ಅನುಕೂಲ ಆಗುವ ನಿಟ್ಟಿನಿಲ್ಲಿ ಕಾಂಗ್ರೆಸ್​ ಯಾವುದೇ ಒಂದು ಯೋಜನೆ ಜಾರಿ ತರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬಗ್ಗೆ ಕಾಳಜಿ ವಹಿಸಿ ರೈತರಿಗೆ ಅನುಕೂಲವಾಗುವಂತ ಹಲವಾರು ಯೋಜನೆಗಳನ್ನು ನೀಡಿದ್ದಾರೆ ಎಂದರು.
ಎಂ. ಎಸ್​. ಕರೀಗೌಡ್ರ ಮಾತನಾಡಿ, ಯೂರಿಯಾ ಗೊಬ್ಬರಕ್ಕೆ ಕೇಂದ್ರ ಸರ್ಕಾರ 2194 ರೂ. ಸಬ್ಸಿಡಿ ನೀಡುತ್ತಿದ್ದು, ಕೇವಲ 266 ರೂ. ಗಳಿಗೆ ರೈತ ಯೂರಿಯಾ ಗೊಬ್ಬರ ಖರೀದಿಸಬಹುದು. ಜಿಲ್ಲೆಯಲ್ಲಿ ಒಟ್ಟು 72 ಕಿಸಾನ್​ ಸಮೃದ್ಧಿ ಕೇಂದ್ರಗಳು ಲೋಕಾರ್ಪಣೆಗೊಂಡಿವೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಂಕರ ಕರಿಬಿಷ್ಠಿ, ರಾಜಣ್ಣ ಕುಲಕಣಿರ್, ಕಾಂತೀಲಾಲ ಬನ್ಸಾಲಿ, ಅನಿಲ ಅಬ್ಬಿಗೇರಿ, ಬೂದಪ್ಪ ಹಳ್ಳಿ, ಭೀಮಸಿಂಗ್​ ರಾಠೋಡ, ಪ್ರಭು ಕಲ್ಬಂಡಿ, ನಿಂಗಪ್ಪ ಹಂಚಿನಾಳ, ಮಲ್ಲೇಶ ಕರಿಬಿಷ್ಠಿ, ಗೂಳಪ್ಪ ಹಳ್ಳದ, ರಾಚಪ್ಪ ಅಂತರಗೊಂಡ, ಮಲ್ಲಿಕಾರ್ಜುನ ಹೊಳೆಯಣ್ಣವರ, ಬಸವರಾಜ ಹುಬ್ಬಳ್ಳಿ, ಸುಭಾಸ ಕದಡಿ, ಬಸವರಾಜ ಹಡಗಲಿ, ಸೌರವ್​ ದೊಬೆ, ಬಸವರಾಜ ಪೂಜಾರ, ವಿಜಯ ಕುರ್ತಕೋಟಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net