ಶಾಂತಾರಾಮ ರಾವ್ ಸಂಸ್ಮರಣೆ ಅರ್ಥಪೂರ್ಣ: ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿಪ್ರಾಯ

New Project (22)
Published on

ಕಿನ್ನಿಗೋಳಿ: ಹಿರಿಯ ಸಾಧಕ, ಸವಾಜ ಸೇವಕ ಕೀರ್ತಿಶೇಷ ಶಾಂತಾರಾಮ ರಾವ್ ಸಂಸ್ಮರಣೆ ನಿಜಕ್ಕೂ ಅರ್ಥಪೂರ್ಣ ಎಂದು ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.

ಕಿನ್ನಿಗೋಳಿ ರಾಮ ಮಂದಿರ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕೀರ್ತಿಶೇಷ ಶಾಂತಾರಾಮ ರಾವ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ವಾತನಾಡಿದರು.

ಕಸಾಪ ವಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ವಾತನಾಡಿ, ಶಾಂತಾರಾಮ ರಾವ್ ಅವರು ಲಯನ್ಸ್‌ನಲ್ಲಿ ಇದ್ದು ಕೊಂಡು ಧೀಮಂತ ನಾಯಕತ್ವದ ಗುಣವುಳ್ಳವರು ಎಂದರು.

ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಕಿನ್ನಿಗೋಳಿ ಜಿಎಸ್‌ಬಿ ಅಧ್ಯಕ್ಷ ರಾಜೇಶ್ ನಾಯಕ್, ವಾಜಿ ಲಯನ್ಸ್ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಸಂಜೀವ ರಾವ್ ಸಂಸ್ಥೆಯ ಯಶವಂತ ರಾವ್, ಲಯನ್ಸ್ ವಾಜಿ ರಾಜ್ಯಪಾಲ ಆಲ್ವಿನ್ ಪತ್ರಾವೋ, ನಿವೃತ್ತ ಉಪನ್ಯಾಸಕ ಡಾ.ಸೋಂದಾ ಭಾಸ್ಕರ ಭಟ್ ಮತ್ತಿತರರು ಉಪಸ್ಥಿರಿದ್ದರು.

ಶಾಂತಾರಾಮ ರಾಯರ ಒಡನಾಡಿ ವೈ. ಯೋಗೀಶ್ ರಾವ್ ಅವರನ್ನು ಗೌರವಿಸಲಾಯಿತು. ಪ್ರವೇಶ್ ಪೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net