

ಚಿಕ್ಕಮಗಳೂರು: ಕಿರ್ಲೋಸ್ಕರ್ ಕಂಪನಿಯು ಈಗ ಅತ್ಯಾಧುನಿಕ ಸಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ೨.೮ - ೫.೫ ಕೆವಿಎ ವರೆಗಿನ ಇನ್ವರ್ಟರ್ ತಂತ್ರಜ್ಞಾನ ಮಾದರಿಯ ಜನರೇಟರನ್ನು ದೇಶದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿಯ ಸೀನಿಯರ್ ಜನರಲ್ ಮ್ಯಾನೇಜರ್ ಭೂಷಣ್ ಪವಾರ್ ತಿಳಿಸಿದರು.
ನಗರದ ಕ್ಯಾಥೋಲಿಕ್ ಕ್ಲಬ್‌ನಲ್ಲಿ ಶುಕ್ರವಾರ ನೂತನ ಜನರೇಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಿರ್ಲೋಸ್ಕರ್ ಕಂಪನಿಯಿAದ ಈ ಹಿಂದೆ ಮಾರುಕಟ್ಟೆಗೆ ತಂದಿರುವ ಜನರೇಟರ್‌ಗಳಿಗಿಂತ ಇಂದು ಬಿಡುಗಡೆಯಾಗುತ್ತಿರುವ ಜನರೇಟರ್ ಇನ್ವರ್ಟರ್ ತಂತ್ರಜ್ಞಾನದ ಸುಧಾರಿತ ಉತ್ಪನ್ನವಾಗಿದೆ. ವಿದ್ಯುತ್ ಸರಬರಾಜುನಲ್ಲಿ ಉಂಟಾಗುವ ಏರಿಳಿತವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಗುಣಮಟ್ಟದ, ಸ್ಥಿರವಾದ ವಿದ್ಯುತ್ ಮತ್ತು ಯಾವುದೇ ತೊಂದರೆಗಳಿಲ್ಲದೆ ವಿದ್ಯುತ್ ಪೂರೈಸುವ ಸಾಮರ್ಥ್ಯ ಈ ಜನರೇಟರ್‌ನ ವಿಶೇಷತೆಯಾಗಿದೆ ಎಂದು ವಿವರಿಸಿದರು.
ಈ ಜನರೇಟರ್ ಪರಿಸರ ಸ್ನೇಹಿಯಾಗಿದೆ. ಶಬ್ದ ಮತ್ತು ವಾಯುಮಾಲಿನ್ಯವನ್ನು ನಿಯಂತ್ರಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸುರಕ್ಷತೆ ಗಮನದಲ್ಲಿಟ್ಟುಕೊಂಡು ತಯಾರಿಸಿರುವ ಈ ಜನರೇಟರ್ ಇಂಧನ ಕಾರ್ಯಕ್ಷಮತೆ ದೃಷ್ಟಿಯಿಂದ ಉತ್ತಮ ಲಾಭದಾಯಕವಾಗಿದೆ ಎಂದು ಹೇಳಿದರು.
ಇತರೆ ಕಂಪನಿಗಳ ಜನರೇಟರ್‌ಗಳಿಗೆ ಹೋಲಿಕೆ ಮಾಡಿದಾಗ ನಿರ್ವಹಣೆ ವೆಚ್ಚ ಕಡಿಮೆಯಾಗಿರುತ್ತದೆ. ಈ ಜನರೇಟರ್‌ಗೆ ಚಕ್ರಗಳನ್ನು ಅಳವಡಿಸಿರುವುದರಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಜೊತೆಗೆ ಕಡಿಮೆ ಸ್ಥಳಾವಕಾಶದಲ್ಲಿ ಈ ಜನರೇಟರ್ ಇಡಬಹುದಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಇಂಧನವನ್ನು ಬಳಸುವ ಎರಡು ಮಾದರಿಗಳಿವೆ ಎಂದು ತಿಳಿಸಿದರು.
ಮುಂಬೈನ್ ಪವರ್ ಟೆಕ್ ಐಡಿಯಾಸ್ ಸಂಸ್ಥೆ ಮುಖ್ಯಸ್ಥ ಸುನಿಲ್ ಸುಬ್ರಮಣಿ, ಕಿರ್ಲೋಸ್ಕರ್ ಕಂಪನಿಯ ಕರ್ನಾಟಕ ರಾಜ್ಯ ಮುಖ್ಯಸ್ಥ ಶ್ರೀನಿವಾಸ್, ಸುಹಾಸ್, ಚಿಕ್ಕಮಗಳೂರು ಜಿಲ್ಲೆಯ ಅಧಿಕೃತ ಮಾರಾಟಗಾರ ವಾಟರ್ ಜೆಟ್ ಎಂಜಿನಿಯರ್ಸ್ನ ಸುನಿಲ್ ಬ್ಯಾಪ್ಟಿಸ್ಟ್ ಉಪಸ್ಥಿತರಿದ್ದರು.