ಮೇ 23ರಂದು ರಾಜ್ಯಾದ್ಯಂತ ಕಿರಿಕ್ ಚಿತ್ರ ತೆರೆಗೆ: ಛಾಯಾಗ್ರಾಹಕ ಕೀರ್ತಿವರ್ಧನ್ ಮಾಹಿತಿ

Kirik film crew press conference Mandya
Published on

ಮಂಡ್ಯ: ನಾಗತಿಹಳ್ಳಿ ಗಂಗಾಧರ್ ನಿರ್ದೇಶನದ ‘ಕಿರಿಕ್’ ಚಲನಚಿತ್ರ ಮೇ.23ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ವೀಕ್ಷಿಸುವಂತೆ ಚಿತ್ರದ ಛಾಯಾಗ್ರಾಹಕ ಕೀರ್ತಿವರ್ಧನ್ ಮನವಿ ಮಾಡಿದರು.

ಚಿತ್ರದಲ್ಲಿನ ಶೇ.70ರಷ್ಟು ಕಲಾವಿದರು ನಾಗಮಂಗಲ ತಾಲೂಕಿನವರೇ ಆಗಿದ್ದು, ಅಂದಾಜು ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಲನಚಿತ್ರದ ಟ್ರೈಲರ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬಿಡುಗಡೆ ಮಾಡಿದ್ದಾರೆ. ಅಂತೆಯೇ ರಾಜ್ಯದಲ್ಲಿ 50 ರಿಂದ 60 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಟೆನ್ನಿಸ್ ಕೃಷ್ಣ, ಹೊನವಳ್ಳಿ ಕೃಷ್ಣರಂತಹ ಹಿರಿಯ ತಾರಾಗಣ ಚಿತ್ರದಲ್ಲಿದೆ. ಮಂಡ್ಯ, ಮೈಸೂರು, ಕಾರವಾರ, ಮಂಗಳೂರು ಇತರೆಡೆ ಚಿತ್ರೀಕರಣ ಮಾಡಲಾಗಿದೆ. ಆರ್.ವಿ.ಭರತ್ ಅವರ ಸಂಗೀತ ನಿರ್ದೇಶನದಲ್ಲಿ 4 ಹಾಡುಗಳಿವೆ ಎಂದು ತಿಳಿಸಿದರು.

ನಿರ್ಮಾಪಕ ನಾಗರಾಜ್, ಸಹನಿರ್ಮಾಪಕ ಹರೀಶ್‌ಶೆಟ್ಟಿ, ನಾಯಕ ನಟ ರವಿಶೆಟ್ಟಿ, ರುದ್ರಾರಾಧ್ಯ, ದೀಪಕ್‌ಗೌಡ, ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net