

ಹುಬ್ಬಳ್ಳಿ: ತಾಲೂಕಿನ ಕಿರೇಸೂರಲ್ಲಿ ಶ್ರಾವಣ ಕೊನೇ ಸೋಮವಾರ ಅಂಗವಾಗಿ ಅಲ್ಲಮ ಪ್ರಭುದೇವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರುದ್ರಾಭಿಷೇಕ, ಪ್ರಭುದೇವರ ಪಲ್ಲಕ್ಕಿ ಉತ್ಸವ ಹಾಗೂ ಅಲ್ಲಮಪ್ರಭುದೇವರು, ಸಿದ್ಧಾರೂಢರು, ಬಸವಣ್ಣ, ಸಿದ್ದೇಶ್ವರ ಸ್ವಾಮೀಜಿ, ಗದುಗಿನ ಪುಟ್ಟರಾಜ ಗವಾಯಿಗಳು, ಸಿದ್ದಗಂಗಾ ಸ್ವಾಮೀಜಿಗಳ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಜರುಗಿತು.
ನಂತರ ಮಹಾಪ್ರಸಾದ ಜರುಗಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗುರು ಹಿರಿಯರು, ಭಜನಾ ಸಂಘದ ಭಕ್ತರು ಪಾಲ್ಗೊಂಡಿದ್ದರು.