ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಕಿರಣ್ ಆಯ್ಕೆ

dh sports
ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ಬಳ್ಳಾವರ ಗ್ರಾಮದ ಕಿರಣ್ ಶೆಟ್ಟಿಯನ್ನು ದಲಿತ ಸಂಘರ್ಷ ಸಮಿತಿಯಿಂದ ಸನ್ಮಾನಿಸಲಾಯಿತು. ಮಣಿ, ಸತೀಶ್, ಧರ್ಮನ್ ಇತರರಿದ್ದರು.
Published on

ಲಿಂಗದಹಳ್ಳಿ: ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗುವ ಬಹುದಿನಗಳ ಕನಸು ನನಸಾಗಿದ್ದು, ಪಾಲಕರು ಹಾಗೂ ಗ್ರಾಮದ ಜನರ ಪ್ರೋತ್ಸಾಹ, ಸಹಕಾರ ಮುಖ್ಯ ಕಾರಣ ಎಂದು ಬಳ್ಳಾವರ ಗ್ರಾಮದ ಯುವ ಪ್ರತಿಭೆ ಕಿರಣ್ ಶೆಟ್ಟಿ ಹೇಳಿದರು.

ಮಾ.2ರಿಂದ 5ರವರೆಗೆ ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕಲ್ಲತ್ತಿಪುರ ಹಾಗೂ ಬಳ್ಳಾವರ ಗ್ರಾಮಗಳ ದಲಿತ ಸಂಘರ್ಷ ಸಮಿತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿದ್ದ ನನ್ನನ್ನು ರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಅವರೆಲ್ಲರ ನಿರೀಕ್ಷೆ ಹುಸಿ ಆಗದಂತೆ ರಾಜ್ಯಕ್ಕೆ ಕೀರ್ತಿ ತರುವುದಾಗಿ ತಿಳಿಸಿದರು.
ಕಲ್ಲತ್ತಿಪುರ, ಬಳ್ಳಾವರ ಗ್ರಾಮಗಳ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಮಣಿ, ಸತೀಶ್, ದರ್ಶನ್, ವೀರರಾಜು, ಲೋಕೇಶ್, ಮಂಜುನಾಥ್, ಮನು, ವೆಂಕಟೇಶ್ ಹಾಗೂ ಗ್ರಾಮಸ್ಥರು ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net