ಕವಿಗೋಷ್ಠಿಗೆ ಕಿರಣ ಅರಮನೆ ಆಯ್ಕೆ

IMG-20250717-WA0026-1.jpg
Published on

ಹುಬ್ಬಳ್ಳಿ: ಕರ್ನಾಟಕ ಸಂಭ್ರಮ-50ರ ಅಭಿಮಾನದ ಅಂಗವಾಗಿ ಕಳೆದ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಅಕಾಡೆಮಿಯವರು ಆಹ್ವಾನಿಸಿದ್ದ ರಾಜ್ಯ ಮಟ್ಟದ ಯುವ ಕವಿಗೋಷ್ಠಿಗೆ ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಅವರ ಆಪ್ತ ಸಹಾಯಕ ಕಿರಣ ಅರಮನೆ ಆಯ್ಕೆಯಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಕವನಗಳನ್ನು ಅಕಾಡೆಮಿಗೆ ಕಳುಹಿಸಿದ್ದರು. ಅದರಲ್ಲಿ ಧಾರವಾಡ ಜಿಲ್ಲೆಯ ಕಂದಾಯ ಇಲಾಖೆಯ ಸಿಬ್ಬಂದಿಯೂ ಆಗಿರುವ ಕಿರಣ ಇವರು ಆಯ್ಕೆಯಾಗಿದ್ದಾರೆ. ಜುಲೈ 21ರಂದು ಬೆಳಗಾವಿ ಕನ್ನಡ ಭವನದಲ್ಲಿ ಏರ್ಪಡಿಸಿರುವ ಕವಿಗೋಷ್ಠಿಯಲ್ಲಿ ಇವರು ಕವನ ವಾಚನ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net