

ಬೆಂಗಳೂರು: ಕೆಐಓಸಿಎಲ್ ಲಿಮಿಟೆಡ್ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ವಿಷಯದಡಿಯಲ್ಲಿ ಎನರ್ಜಿ ಯೋಗ ಸೆಂಟರ್‌ನಲ್ಲಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಬಿ.ಕೆ. ಮಹಾಪಾತ್ರ, ಎಸ್‌ವಿಆರ್ ಚಂದ್ರಶೇಖರ್, ಮುಖ್ಯ ವಿಜಿಲೆನ್ಸ್ ಅಧಿಕಾರಿ ಸಿ ಮುನಿಕೃಷ್ಣ ಮತ್ತಿತರ ಸಿಬ್ಬಂದಿಗಳು ಮತ್ತು ಸಂಸ್ಥೆಯ ನಿವೃತ್ತ ಅಧಿಕಾರಿಗಳು ಭಾಗವಹಿಸಿದ್ದರು.
ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಯೋಗಕ್ಷೇಮವನ್ನು ಉತ್ತೇಜಿಸುವ ವಿವರಣೆಗಳ ಜೊತೆಗೆ ವಿವಿಧ ಆಸನಗಳು ಮತ್ತು ಪ್ರಾಣಾಯಾಮವನ್ನು ಹೇಳಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ.ಮಹಾಪಾತ್ರ, ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ; ಇದು ಆಂತರಿಕ ಶಾಂತಿ ಮತ್ತು ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸಿ ದೇಹ, ಮನಸ್ಸು ಮತ್ತು ಆತ್ಮದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಸಕಾರಾತ್ಮಕ ಕೆಲಸದ ವಾತಾವರಣವನ್ನು ಉತ್ತೇಜಿಸಲು ಕೆಐಓಸಿಎಲ್ ಯೋಗದ ಬದ್ಧತೆಯನ್ನು ತಿಳಿದುಕೊಂಡಿದೆ ಎಂದು ತಿಳಿಸಿದರು.