ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಸೌಲಭ್ಯಕ್ಕೆ ಕಿಯಾಸ್ಕ್

mangalore Airport
Published on

ಮಂಗಳೂರು: ವಿಮಾನದ ಬೋರ್ಡಿಂಗ್ ಪಾಸ್, ಬ್ಯಾಗೇಜ್ ಟ್ಯಾಗ್‌ಗಳನ್ನು ಪ್ರಯಾಣಿಕರೇ ಸ್ವಯಂ ಮುದ್ರಿಸಿಕೊಳ್ಳುವ ನಾಲ್ಕು ಕಿಯಾಸ್ಕ್‌ಗಳನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ.

ಎಲ್ಲದರಲ್ಲೂ ಬೋರ್ಡಿಂಗ್ ಪಾಸ್ ಮುದ್ರಿಸಬಹುದು, ಮೂರರಲ್ಲಿ ಪಾಸ್ ಜತೆಗೆ ಬ್ಯಾಗೇಜ್ ಟ್ಯಾಗನ್ನೂ ಮುದ್ರಿಸಿಕೊಳ್ಳಬಹುದು. ಮುಂದೆ ಇಂತಹ ಇನ್ನಷ್ಟು ಕಿಯಾಸ್ಕ್ ಸ್ಥಾಪಿಸುವ ಮೂಲಕ ಪ್ರಯಾಣಿಕರ ಸೌಲಭ್ಯ ಹೆಚ್ಚಿಸಲು ವಿಮಾನ ನಿಲ್ದಾಣ ಆಡಳಿತ ಯೋಜನೆ ಹಾಕಿಕೊಂಡಿದೆ. ಇದರಿಂದಾಗಿ ಪ್ರಯಾಣಿಕರು ಚೆಕ್‌ಇನ್ ಕೌಂಟರ್ ಮುಂಭಾಗ ಸಾಲಿನಲ್ಲಿ ನಿಂತು ಬೋರ್ಡಿಂಗ್ ಪಾಸ್‌ಗಾಗಿ ಕಾಯುವ ಪ್ರಮೇಯ ಇರುವುದಿಲ್ಲ. ಪ್ರಸ್ತುತ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಗೋಫಸ್ಟ್, ಇಂಡಿಗೋ ಸಂಸ್ಥೆಗಳು ಈ ಕಿಯಾಸ್ಕ್ ಬಳಕೆಗೆ ಪೂರಕ ಸೌಲಭ್ಯ ಸೃಷ್ಟಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net