

ಆಲ್ದೂರು: ಕಂಚಿನಕಲ್ ದುರ್ಗಾ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಕಾರ್ಮಿಕ ಕಿನ್ನಿ ಮನೆಗೆ ಶಾಸಕಿ ನಯನಾ ಮೋಟಮ್ಮ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದರು.
ಕಾರ್ಮಿಕ ಕಿನ್ನಿ ಕಂಚಿನಕಲ್ ದುರ್ಗಾದ ಗ್ರಾಮದಿಂದ ಹೆಂಡತಿಗೆ ಮಾತ್ರೆ ತರುವ ಸಲುವಾಗಿ ಕಾಲು ದಾರಿಯಲ್ಲಿ ಅರೆನೂರು ಗ್ರಾಮಕ್ಕೆ ನಡೆದುಕೊಂಡು ಬರುತ್ತಿದ್ದಾಗ ಕಾಡಾನೆ ತುಳಿದು ಸಾಯಿಸಿತ್ತು.
ಮಂಗಳವಾರ ಶಾಸಕಿ ನಯನಾ ಮೋಟಮ್ಮ ಅವರು ಕಿನ್ನಿ ಮನೆಗೆ ಭೇಟಿ ನೀಡಿ ಪತ್ನಿ ರತ್ನಾ ಅವರ ಯೋಗಕ್ಷೇಮ ವಿಚಾರಿಸಿದರು. ನಂತರ ಮಾತನಾಡಿ, ಕಿನ್ನಿ ಮೃತಪಟ್ಟ ದಿನ 5 ಲಕ್ಷ ರೂ. ಪರಿಹಾರದ ಚೆಕ್‌ನ್ನು ಅರಣ್ಯಾ ಇಲಾಖೆ ನೀಡಿತ್ತು. ಸರ್ಕಾರದ ಪರಿಹಾರದ 5 ಲಕ್ಷ ರೂ. ಮೊತ್ತದ ಚೆಕ್ ನೀಡುತ್ತಿದ್ದು, ಇನ್ನುಳಿದ ಪರಿಹಾರದ ಹಣ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು. ನಾನು ನಿಮ್ಮ ಸಂಪರ್ಕದಲ್ಲಿರುತ್ತೇನೆ. ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ರತ್ನಾ ಅವರಿಗೆ ವೈಯಕ್ತಿಕ ಮೊಬೈಲ್ ನಂಬರ್ ನೀಡಿ ಅಗತ್ಯವಿದ್ದ ಸಂದರ್ಭದಲ್ಲಿ ಕರೆ ಮಾಡುವಂತೆ ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಆನೆ ಕಾರ್ಯಪಡೆ ತಂಡಗಳು ಕಾಡಾನೆ ಇರುವಿಕೆ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ತಿಳಿಸಿದರು.
ಎಸಿಎ್ ಮಂಜುನಾಥ್, ಆಲ್ದೂರು ವಲಯ ಅರಣ್ಯಾಧಿಕಾರಿ ಎಂ.ಆರ್.ಹರೀಶ್, ಆಲ್ದೂರು ಪಿಎಸ್‌ಐ ಅಕ್ಷಿತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಮುದಾಬಿರ್, ಕಾರ್ಯದರ್ಶಿ ಇದ್ರಿಸ್ ಅಹಮದ್, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಪೂರ್ಣೇಶ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರ್, ಕಿರಣ್, ಬಸವಯ್ಯ, ಪ್ರಕಾಶ್ ಇತರರಿದ್ದರು.