ಭರತಾಂಜಲಿಯಿಂದ ಕಿಂಕಿಣಿ ತ್ರಿಂಶತ್

Published on

ಮಂಗಳೂರು: ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ಮಂಗಳೂರು ಪುರಭವನದಲ್ಲಿ ಜು.6ರಂದು ಸಂಜೆ 5 ರಿಂದ ಕಿಂಕಿಣಿ ತ್ರಿಂಶತ್ ನೃತ್ಯಾಮೃತಂ-2025 ಕಾರ್ಯಕ್ರಮ ಹಮ್ಮಿಕೊಂಡಿದೆ. ಗುರು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ನಟರಾಜನಿಗೆ ದೀಪವನ್ನು ಬೆಳಗಿಸಲಿರುವರು. ಶ್ರೀಎಡನೀರು ಸಂಸ್ಥಾನದ ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಉದ್ಯಮಿ ವಿಶ್ವೇಶ್ವರ ಭಾಗವಹಿಸಲಿರುವರು ಎಂದು ಭರತಾಂಜಲಿಯ ಗುರು ಪ್ರತಿಮಾ ಶ್ರೀಧರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net