ಸ್ನಾನಗೃಹದೊಳಗೆ ಅವಿತಿತ್ತು 10 ಅಡಿ ಉದ್ದದ ಕಾಳಿಂಗ ಸರ್ಪ

kobra
Published on

ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸಮೀಪದ ಮುಂಡಾಜೆ ಕಾಪು ರಕ್ಷಿತಾರಣ್ಯದ ಬದಿಯಲ್ಲಿರುವ ಮನೆಯೊಂದರ ಸ್ನಾನಗೃಹದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಂಡು ಬಂದಿದೆ.

ಚಾರ್ಮಾಡಿ ಗ್ರಾಪಂ ಮಾಜಿ ಸದಸ್ಯೆ ದೇವಕಿ ಅವರ ಮನೆಯ ಸ್ನಾನಗೃಹದಲ್ಲಿ ಕಾಳಿಂಗಸರ್ಪ ಕಂಡು ಬಂದಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಉಪ ವಲಯಾರಣ್ಯಾಧಿಕಾರಿ ಭವಾನಿ ಶಂಕರ ನೇತೃತ್ವದಲ್ಲಿ ಸ್ನೇಕ್ ಅನಿಲ್ 10 ಅಡಿಗಿಂತ ಉದ್ದದ ಹಾವನ್ನು ಒಂದು ಗಂಟೆಯಷ್ಟು ಕಾಲ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹಿಡಿದು ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net