KEA ಅಕ್ರಮ ಕಿಂಗ್‌ಪಿನ್ ಆರ್‌.ಡಿ.ಪಾಟೀಲ್ ಬಂಧನ

KLB R D PATIL
Published on

ಕಲಬುರಗಿ: ಕೆಇಎ ಪರೀಕ್ಷಾ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ, ಕಿಂಗ್‌ಪಿನ್ ಆರ್.ಡಿ.ಪಾಟೀಲ್‌ನನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಶುಕ್ರವಾರ ಮಧ್ಯಾಹ್ನ ೩ಗಂಟೆ ವೇಳೆಗೆ ಬಂಧನ ಮಾಡಿದ್ದಾರೆ.

ಕಳೆದ 12ದಿನದಿಂದ ತಲೆ ಮರೆಸಿಕೊಂಡಿದ್ದ ಆರ್​ಡಿಪಿ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಿಂದ ಕಲಬುರಗಿಗೆ ಆಗಮಿಸುವ ವೇಳೆ ಬಲೆ ಬೀಸಿರುವ ಪೊಲೀಸರು ಬಂಧನ ಮಾಡಿದ್ದಾರೆ. ಸಂಬಂಧಿಕರ ಮನೆಯಿಂದ ಕಲಬುರಗಿಗೆ ಆಗಮಿಸಿ, ನ್ಯಾಯಾಲಯಕ್ಕೆ ಶರಣಾಗಲು ಆಗಮಿಸುತ್ತಿದ್ದ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗಡಿಯಲ್ಲಿಯೇ ತೀವ್ರ ನಿಗಾ ಇಟ್ಟಿದ್ದರು. ಶರಣಾಗಲು ಆಗಮಿಸುವ ವೇಳೆ ಬಂಧನ ಮಾಡಿದ್ದಾರೆ.

ಬಂಧಿಸಿದ ನಂತರ ಕಲಬುರಗಿಗೆ ಕರೆದುಕೊಂಡು ಬಂದು ವೈದ್ಯಕೀಯ ತಪಾಸಣೆ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆಗಳಿವೆ.
ಪರೀಕ್ಷೆ ಅಕ್ರಮದ ಆರೋಪ ಕೇಳಿ ಬಂದ ನಂತರ ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದು, ಆರ್.ಡಿ.ಪಾಟೀಲ್. ನಾಲ್ಕು ದಿನದ ಹಿಂದೆ ನಗರದ ಅಪಾರ್ಟ್ಮೆಂಟ್‌ನಿAದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಓಡಿ ಹೋಗಿದ್ದ. ಇದರಿಂದ ಆತನ ಬಂಧನಕ್ಕೆ ಬಾರಿ ಜಾಲ ಬೀಸಿದ್ದ ಪೊಲೀಸರು ಕಲಬುರಗಿ ನಗರ ಆಯುಕ್ತರ ವ್ಯಾಪ್ತಿ, ಜಿಲ್ಲಾ ಪೊಲೀಸರಿಂದ ಒಟ್ಟು ೧೩ ತಂಡಗಳನ್ನು ರಚಿಸಿ, ಬಂಧನಕ್ಕೆ ಮುಂದಾಗಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net