ಕಾಯಕನಿಷ್ಠೆ ಎಲ್ಲರಿಗೂ ದಾರಿದೀಪ

NAREGAL SANMAN
Published on

ನರೇಗಲ್ಲ: ಶಿವಶರಣ ಅಪ್ಪಣ್ಣನವರು ಅನುಭವ ಮಂಟಪದ ಕಾರ್ಯದರ್ಶಿಯಾಗಿ ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾಯಕ ನಿರ್ವಹಿಸಿದರು. ಅವರ ಬಹುತೇಕ ವಚನಗಳು ಬೆಡಗಿನ ವಚನಗಳಾಗಿವೆ. ಇವರ ವಚನಗಳಲ್ಲಿ ಶರಣರಿಗಿರಬೇಕಾದ ಕಾಯಕನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ- ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿಸಲು ಯತ್ನಿಸಿದ್ದಾರೆ ಎಂದು ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ಹೇಳಿದರು.

ಪಟ್ಟಣದ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

12ನೇ ಶತಮಾನದ ಅಸಮಾನತೆ, ಶೋಷಣೆ ವಿರೋಧಿಸಿ ಹೊಸ ಸಮಾಜದ ಸ್ಥಾಪನೆಗೆ ಹೋರಾಡಿದ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಮಾಚಿದೇವ ಮುಂತಾದ ಶರಣರಂತೆಯೇ ಅಪ್ಪಣ್ಣನವರೂ ಪೂಜನೀಯರಾಗಿದ್ದಾರೆ. ಬಸವ ಕೇಂದ್ರಿತ ವಿರಾಟ್ ಸಾಮಾಜಿಕ ಆಂದೋಲನವು ಸರಿದಾರಿಯಲ್ಲಿ ಸಾಗಲು ಅಪ್ಪಣ್ಣನವರ ಕೊಡುಗೆ ಅಪಾರ. ಅವರ ಕಾಯಕನಿಷ್ಠೆ, ಭಕ್ತಿ, ವೈರಾಗ್ಯ ಮತ್ತು ದಾಸೋಹಗಳು ನಮಗೆಲ್ಲರಿಗೂ ದಾರಿದೀಪಗಳಾಗಿವೆ ಎಂದರು.

ಎಸ್.ವಿ. ಹಿರೇಮಠ, ವಿ.ಪಿ. ಗ್ರಾಮಪೂರೋಹಿತ, ಎಸ್.ಕೆ. ಕುಲಕರ್ಣಿ, ಎಂ.ವೀ. ಕಡೆತೋಟದ, ವಿ.ಎಸ್. ಜಾಧವ, ಎಸ್.ಎಚ್. ಮಾನ್ವಿ, ಎಂ.ಎಂ. ಸಿಳ್ಳಿನ, ಕೆ.ಐ. ಕೋಳಿವಾಡ, ಐ.ಬಿ. ಒಂಟೇಲಿ, ಎನ್.ಜೆ. ಸಂಗನಾಳ, ವಿ.ಎಚ್. ಹಳ್ಳಿ, ಜೆ.ವಿ. ಕೆರಿಯವರ, ಇತರರಿದ್ದರು.

ಬೂದಿಹಾಳ ಶಾಲೆ: ಸಮೀಪದ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಡಾ.ಸಂಗಮೇಶ ತಮ್ಮನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸಿ.ಕೆ. ಕೇಸರಿ, ಬಸವರಾಜ ದೇಸಾಯಿಪಟ್ಟಿ, ಅಂದಪ್ಪ ಹಡಪದ, ಮುತ್ತಪ್ಪ ಚಿಗರಿ, ಬಸವರಾಜ ಪೂಜಾರ ಇದ್ದರು.

ನರೇಗಲ್ಲ ಸಮೀಪದ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಶಿಕ್ಷಕ ಬಸವರಾಜ ದೇಸಾಯಿಪಟ್ಟಿ ಮಾತನಾಡಿದರು. ಡಾ. ಸಂಗಮೇಶ ತಮ್ಮನಗೌಡ್ರ ಶಿಕ್ಷಕ ಸಿ.ಕೆ. ಕೇಸರಿ, ಅಂದಪ್ಪ ಹಡಪದ, ಮುತ್ತಪ್ಪ ಚಿಗರಿ, ಬಸವರಾಜ ಪೂಜಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net