ಕಿನಾರ ಶಾಲೆ ವಾರ್ಷಿಕ ಕ್ರೀಡಾಕೂಟ

pdb-2
Published on

ಪಡುಬಿದ್ರಿ: ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಆಡಳಿತದ ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಮಂಗಳವಾರ ನಡೆಯಿತು.

ಗಿರೀಶ್ ಎಸ್ ಕುಂದರ್ ಧ್ವಜಾರೋಹಣ ನೆರವೇರಿಸಿದರು. ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಅಧ್ಯಕ್ಷ ಸುರೇಶ್ ಕುಂದರ್ ಉದ್ಘಾಟಿಸಿದರು.

ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಮಿತ್ ಪುತ್ರನ್ ಮುಂಬೈ, ದೀರೇಶ್ ಕೋಟ್ಯಾನ್, ಎರ್ಮಾಳು ತೆಂಕ ಮೊಗವೀರ ಸಭಾ ಅಧ್ಯಕ್ಷ ಲಿಂಗಪ್ಪ ಪುತ್ರನ್, ಮೊಗವೀರ ಸಭಾ ಮುಂಬೈ ಉಪಾಧ್ಯಕ್ಷ ರವಿ ಪುತ್ರನ್, ಪ್ರಭಾಕರ್ ಪುತ್ರನ್, ಸುನೀಲ್ ಕುಮಾರ್, ಪಾಲಕರ ಪ್ರತಿನಿಧಿ ಮಹಮ್ಮದ್ ಸಲೀಂ, ಮುಖ್ಯ ಶಿಕ್ಷಕಿ ಪ್ರೀತಿ ಸುವರ್ಣ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸರಿತಾ ಸಂದೇಶ ವಂದಿಸಿದರು. ಪ್ರತಿಮಾ ಹಾಗೂ ಅನುಷಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net