ಸಮಾಜಮುಖಿ ಕಾರ್ಯಕ್ಕೆ ಸಂಸ್ಥೆಗಳು ಮುಂದಾಗಲಿ

25 hrr
Published on

ಹರಿಹರ: ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆಗಳು ಮುಂದಾಗಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ಕಿಲೋಸ್ಕರ್ ಇನ್ಸ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ವೆುಂಟ್ ವತಿಯಿಂದ ನಿರ್ವಿುಸಲಾಗಿದ್ದ ನಗರದ ಜೋಡು ಬಸವೇಶ್ವರ ದೇವಸ್ಥಾನದಿಂದ ಕಾಲೇಜಿಗೆ ಸಂರ್ಪಸುವ ಅರ್ಧ ಕಿಲೋಮೀಟರ್ ರಸ್ತೆ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಸಂಸ್ಥೆಯೊಂದು ಸಾಮಾಜಿಕ ಜವಾಬ್ದಾರಿಯಿಂದ ರಸ್ತೆ ನಿರ್ವಿುಸುವ ಮೂಲಕ ಕಳಕಳಿ ತೋರಿಸಿದೆ. ಇತರೆ ಸಂಸ್ಥೆಗಳು ಈ ರೀತಿ ಸಮಾಜಮುಖಿ ಕಾರ್ಯ ಕೈಗೊಳ್ಳಲು ಮುಂದಾಗಬೇಕು ಎಂದರು.

ಹರಿಹರದಿಂದ ಹಾದು ಹೋಗುವ ಹೊಸಪೇಟೆ ಹೆದ್ದಾರಿ ರಸ್ತೆಯು ಮಳೆಗಾಲದಲ್ಲಿ ವಾಹನ ದಟ್ಟಣೆ ಹಾಗೂ ಇತರೆ ಸಮಸ್ಯೆಗಳಿಂದ ಪರ್ಯಾಯ ರಸ್ತೆಯಿಲ್ಲದೆ ವಾಹನ ಸವಾರರು ಪರದಾಡುತ್ತಿದ್ದರು. ಕಿಮ್್ಸ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಅರ್ಧ ಕಿಮೀ ರಸ್ತೆ ಅಭಿವೃದ್ಧಿಪಡಿಸಿದ್ದಾರೆ. ನಗರಸಭೆಯವರು ಉಳಿದ ರಸ್ತೆ ಅಭಿವೃದ್ಧಿಪಡಿಸಿದರೆ ವಾಹನ ಸಂಚಾರಕ್ಕೆ ಯೋಗ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸ್ಥಳದಲ್ಲಿದ್ದ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೆ ಸೂಚಿಸಿದರು.

ಕಿಲೋಸ್ಕರ್ ಮ್ಯಾನೇಜ್​ವೆುಂಟ್ ಸರ್ವಿಸ್ ಲಿಮಿಟೆಡ್ ನಿರ್ದೇಶಕ ಪ್ರದೀಪ್ ಕೊಪರ್ಡೆಕರ್ ಮಾತನಾಡಿ, ಶೈಕ್ಷಣಿಕ ಹಾಗು ಸಾಮಾಜಿಕ ಕಾರ್ಯಕ್ರಮ ಸಂಸ್ಥೆಯ ಆಶಯವಾಗಿದ್ದು, ಸುಮಾರು 36.5 ಲಕ್ಷದಲ್ಲಿ ಈ ರಸ್ತೆ ನಿರ್ವಿುಸಲಾಗಿದೆ. ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಎಂ. ಜಂಬಣ್ಣ, ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ, ಸದಸ್ಯರಾದ ವಿರೂಪಾಕ್ಷಿ, ಇಬ್ರಾಹಿಂ ಖುರೇಶಿ, ಸಂಸ್ಥೆ ನಿರ್ದೇಶಕ ಡಾ. ನಂದೀಶ್ ವಿ. ಹಿರೇಮಠ್, ಡಾ. ಬಿ.ವಿ. ನಾಗರಾಜ್, ಡಾ. ವಿನಯ್ ಭೂಷಣ್, ವ್ಯವಸ್ಥಾಪಕ ರಾಘವೇಂದ್ರ ದೀಕ್ಷಿತ್, ಎಂ.ಪಿ. ಪರಮೇಶ್ವರಪ್ಪ, ಗುತ್ತಿಗೆದಾರ ವಾಮನಾಯಸ್ ಕುಲಕರ್ಣಿ, ಪಂಚವಟಿ ಎಂಟರ್​ಪ್ರೈಸಸ್​ನ ಕೆ.ಟಿ. ವೀರಪ್ಪ, ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net