ಕಿಮ್ಸ್​ ಕಪ್ ಚೆಸ್ ಪಂದ್ಯಾವಳಿ 14ರಂದು

chess
Published on

ಹುಬ್ಬಳ್ಳಿ: ಇಲ್ಲಿಯ ಕಿಮ್ಸ್​ನ ವಿದ್ಯಾರ್ಥಿಗಳ ಕ್ರೀಡಾ ಸಂಘವು, ಹುಬ್ಬಳ್ಳಿ ಚೆಸ್ ಅಕಾಡೆಮಿ ಸಹಯೋಗದೊಂದಿಗೆ ಜು. 14ರಂದು ಕಿಮ್್ಸ ಕಪ್-2 ಚೆಸ್ ಪಂದ್ಯಾವಳಿ ಆಯೋಜಿಸಿದೆ.

15 ವಯೋಮಿತಿ ಹಾಗೂ ಮುಕ್ತ ವಿಭಾಗದಲ್ಲಿ ಸ್ಪರ್ಧಿಗಳು ಭಾಗವಹಿಸಬಹುದು. ಸ್ವಿಸ್ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು 7 ಸುತ್ತುಗಳು ಇರಲಿವೆ. ಮುಕ್ತ ವಿಭಾಗದಲ್ಲಿ ಒಟ್ಟು 3 ಸಾವಿರ ರೂ ನಗದು ಬಹುಮಾನ ಹಾಗೂ 15 ವಯೋಮಿತಿ ವಿಭಾಗದಲ್ಲಿ 40 ಪಾರಿತೋಷಕ, ಪದಕ, ಪ್ರಮಾಣ ಪತ್ರ ನೀಡಲಾಗುವುದು.

ಹೆಸರು ನೋಂದಾಯಿಸಲು ಜು. 12ಕೊನೆಯ ದಿನವಾಗಿದೆ. ಸ್ಪರ್ಧೆಯ ದಿನದಿಂದ ಬೆಳಗ್ಗೆ 9 ಗಂಟೆಗೆ ವಿದ್ಯಾನಗರದಲ್ಲಿರುವ ಕಿಮ್್ಸ ಆಡಳಿತ ಬ್ಲಾಕ್ ಕಟ್ಟಡದಲ್ಲಿ ಸ್ಪರ್ಧಿಗಳು ಹಾಜರಿರಬೇಕು ಎಂದು ಹುಬ್ಬಳ್ಳಿ ಚೆಸ್ ಅಕಾಡೆಮಿಯ ಕೆ.ವಿ. ಶ್ರಿಪಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net