ಹುಬ್ಬಳ್ಳಿ ಕಿಮ್ಸ್ ನಲ್ಲಿ ಸರ್ವರ್ ಡೌನ್, ಸಾರ್ವಜನಿಕರಿಗೆ ಕಿರಿಕಿರಿ

IMG_20230516_102928_507-1.jpg
Published on

ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರೋಗ್ಯದೇವತೆ, ಇಲ್ಲಿಯ ಕಿಮ್ಸ್ ನಲ್ಲಿ ಸರ್ವರ್ ಡೌನ್ ಆಗಿ ಎರಡು ತಾಸಿಗೂ ಹೆಚ್ಚು ಕಾಲ ಸಾರ್ವಜನಿಕರು ಸಮಸ್ಯೆ ಎದುರಿಸಿದರು.

ಮಂಗಳವಾರ ಬೆಳಗ್ಗೆಯಿಂದಲೇ ಸರ್ವರ್ ಇಲ್ಲದೇ ಜನರು, ರೋಗಿಗಳು ತೀವ್ರ ತೊಂದರೆಗೊಳಗಾದರು.

ವಿವಿಧ ವಿಭಾಗಗಳಿಗೆ ತಪಾಸಣೆಗೆ ತೆರಳಲು ಚೀಟಿ ಮಾಡಿಸಲು ಸಾಧ್ಯವಾಗಲಿಲ್ಲ.

ವಿವಿಧ ತಪಾಸಣೆಗಳ ಬಿಲ್ ಪಾವತಿಸಲು ಸರದಿಯಲ್ಲಿ ಕಾಯುತ್ತಿರುವ ನೂರಾರು ಜನರ ಸಾಲು ಕಂಡು ಬಂತು.

ಕಿಮ್ಸ್ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net