ಕಿಮ್ಸ್‌ಗೆ ದಾಖಲಾಗಿದ್ದ ಗಾಯಾಳು ಸಾವು

Accident (16)
Published on

ಹುಬ್ಬಳ್ಳಿ: ತಾಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ವಾಹನ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಕಿಮ್ಸ್‌ನಲ್ಲಿ ಸೋಮವಾರ ಮೃತಪಟ್ಟಿದ್ದಾರೆ.

ನಲವಡಿ ಗ್ರಾಮದ ಪಾಂಡಪ್ಪ ಮುದರಡ್ಡಿ (42) ಮೃತರು. ಹುಬ್ಬಳ್ಳಿಯಿಂದ ಗದಗ ಕಡೆ ಹೊರಟ್ಟಿದ್ದ ವಾಹನವು, ಹುಬ್ಬಳ್ಳಿಯಿಂದ ನಲವಡಿ ಕಡೆ ಹೊರಟಿದ್ದ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net