

ಅಥಣಿ ಗ್ರಾಮೀಣ: ಪ್ರಕೃತಿಯಲ್ಲಿ ಹೆಣ್ಣು, ಗಂಡು ಸಮಾನರಾಗಿದ್ದು, ಹೆಣ್ಣು ಭ್ರೂಣ ಹತ್ಯೆ ಮಹಾಪಾಪ ಎಂದು ಶೇಗುಣಸಿಯ ಹಣಮಂತ ಮಹಾರಾಜರು ಹೇಳಿದರು.
ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ವ್ಯಸನಮುಕ್ತ ಹಾಗೂ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಮಂಗಳವಾರ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ತ್ರೀ, ಪುರುಷ ಎಂಬ ಭೇದಭಾವ ಸಲ್ಲದು. ಹೆಣ್ಣು ಭ್ರೂಣವೆಂದು ತಿಳಿದು ಹತ್ಯೆ ಮಾಡುವುದರಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತದೆ ಎಂದರು.
ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಮಾತನಾಡಿ, ಯುವಜನತೆ ವ್ಯಸನಗಳಿಂದ ದೂರವಿರಬೇಕು. ಪಾಲಕರು ಮಕ್ಕಳಿಗೆ ಸೂಕ್ತ ನಿರ್ದೇಶನ ನೀಡುವುದು ಅವಶ್ಯ ಎಂದರು.
ಶ್ರೀಶೆಲ ನಾರಗೊಂಡ, ಪರಗೊಂಡ ಶಿರಗುಪ್ಪಿ, ಯೋಜನಾಕಾರಿ ರಜಬ್‌ಲಿ ಮೇಲಿನಮನಿ, ಜಡೆಪ್ಪ ಕುಂಬಾರ, ಸಂಜೀವಕುಮಾರ ಜಮಖಂಡಿ, ಮಲ್ಲಪ್ಪ ಬ್ಯಾಳಗೌಡರ, ಮಹಾಂತೇಶ ತಮದಡ್ಡಿ, ಕುಮಾರ ಸೋಲಂಕರ ಇತರರಿದ್ದರು.