

ಮುದ್ದೇಬಿಹಾಳ: ತಾಲೂಕಿನ ಮುದ್ನಾಳ ತಾಂಡಾದ ವಿವಾಹಿತೆ, ಬಂಜಾರ ಸಮುದಾಯದ ಶೋಭಾ ಲಮಾಣಿ ಹತ್ಯೆಗೆ ಶಾಸಕ, ಕೆಎಸ್ಡಿ ನಿಗಮದ ಅಧ್ಯ ಸಿ.ಎಸ್.ನಾಡಗೌಡರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಹಸೀಲ್ದಾರ್, ಸಿಪಿಐ, ಪಿಎಸ್ಐ ಅವರಿಗೆ ದೂರವಾಣಿ ಕರೆ ಮಾಡಿ ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮಕ್ಕೆ ಸೂಚಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೂ ಕರೆ ಮಾಡಿ ಸರ್ಕಾರದಿಂದ ದೊರೆಯುವ ಪರಿಹಾರವನ್ನು ಆಕೆಯ ಕುಟುಂಬಕ್ಕೆ ತಲುಪಿಸುವಂತೆ ತಿಳಿಸಿದ್ದಾರೆ. ಸದ್ಯ ಶಿಗ್ಗಾಂವಿ ಮತೇತ್ರದ ಉಪಚುನಾವಣೆಯ ಪ್ರಚಾರದಲ್ಲಿರುವ ಶಾಸಕರು ಅಲ್ಲಿಂದಲೇ ಮಾತನಾಡಿದ್ದು, ಉಪ ಚುನಾವಣೆಯ ಪ್ರಚಾರ ಮುಗಿದ ಮೇಲೆ ಇಲ್ಲಿಗೆ ಆಗಮಿಸಿ ಸಂತ್ರಸ್ತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳುವುದಾಗಿ ತಿಳಿಸಿದ್ದಾರೆ.
ಜಾರ ಸಮಾಜದ ಯುವ ಮುಖಂಡ ಲಕ್ಷ$್ಮಣ ಚವ್ಹಾಣ (ಲಮಾಣಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುರುವಾರ ಆಲ್ ಇಂಡಿಯಾ ಬಂಜಾರ ಸೇವಾ ಸಂದಿಂದ ದುಷ್ಕರ್ಮಿಗಳನ್ನು ಗಲ್ಲಿಗೇರಿಸುವಂತೆ ನಡೆಸಿದ ಪ್ರತಿಭಟನೆಯಲ್ಲಿ ದಲಿತ ಮುಖಂಡರು ಶಾಸಕರ ವಿರುದ್ದ ಅಸಮಾಧಾನ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.