ಕೊಡಲಿಯಿಂದ ಹೊಡೆದು ಪತ್ನಿಯ ಕೊಲೆ

Published on

ಹುಬ್ಬಳ್ಳಿ: ಪತ್ನಿಯ ತಲೆಗೆ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ಇಲ್ಲಿನ ಆನಂದ ನಗರದ ಬ್ಯಾಹಟ್ಟಿ ಪ್ಲ್ಯಾಟ್​ನಲ್ಲಿ ಸೋಮವಾರ ನಡೆದಿದೆ.

ಭೀಮಪ್ಪ ಮುತ್ತಲಗಿ ಎಂಬಾತ ತನ್ನ ಪತ್ನಿ ಮಂಜುಳಾಗೆ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದು, ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣವೆಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಘಟನಾ ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಾರದ ಹಿಂದೆ ಪತ್ನಿಯ ಕತ್ತು ಹಿಚುಕಿ ಕೊಂದು ಪತಿ ಪರಾರಿಯಾಗಿದ್ದ. ಶನಿವಾರ ರಾತ್ರಿ ಆರೋಪಿ ಪತ್ತೆಯಾಗಿದ್ದಾನೆ. ನಂತರ ಮತ್ತೊಂದು ಇಂಥದ್ದೇ ಪ್ರಕರಣ ನಡೆದಿರುವುದು ವಾಣಿಜ್ಯ ನಗರಿಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net