ಮಹಾತ್ಮರ ಗುಣಗಾನ ನಿರಂತರವಾಗಿರಲಿ

02-kkr1(10-23
ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹಾದುರ್ ಶಾಸ್ತ್ರಿ ಜಯಂತಿ ಸೋಮವಾರ ನಡೆಯಿತು. ರೇವತಿ, ಸಿದ್ದಲಿಂಗ ಬಾನಸೆ, ರಮೇಶ್, ಮಹದೇವ, ಕುಮಾರ್, ಕೃಷ್ಣ, ವಿನೋದ್, ಶಿಲ್ಪಾ, ಮಮತಾ ಮತ್ತಿತರರಿದ್ದರು.
Published on

ಕಿಕ್ಕೇರಿ: ದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರ ಗುಣಗಾನ ನಿರಂತರವಾಗಿ ಮನೆ, ಮನಗಳಲ್ಲಿ ನಡೆಯಬೇಕಿದೆ ಎಂದು ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ, ಲಾಲ್ ಬಹಾದುರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆ ಕನಸಾಗಿಯೇ ಉಳಿದಿದೆ. ದೇಶಪ್ರೇಮ, ಸ್ವಾಭಿಮಾನ ಮೂಡದೆ ದೇಶದ ಸಮಸ್ಯೆ ಬಗೆಹರಿಯಲಾರದು. ಗಾಂಧೀಜಿ ಹಾಕಿಕೊಟ್ಟ ಸತ್ಯ, ಅಹಿಂಸೆ, ಸನ್ನಡತೆ, ರಾಷ್ಟ್ರಪ್ರೇಮವನ್ನು ಎಲ್ಲರೂ ಮೈಗೂಢಿಸಿಕೊಳ್ಳದೆ ದೇಶದ ಸಮಸ್ಯೆ ಪರಿಹಾರ ಸಾಧ್ಯವೇ ಇಲ್ಲ ಎಂದರು.

ಶಾಸ್ತ್ರೀಜಿ, ಗಾಂಧೀಜಿ ಅವರ ಜನ್ಮ ದಿನ ನಾಡಿಗೆ ಪವಿತ್ರ ದಿನವಾಗಿದೆ. ಬಡತನದಲ್ಲಿ ನಲುಗುತ್ತಿದ್ದ ದೇಶವನ್ನು ಕೃಷಿ ಸಾಮ್ರಾಜ್ಯವಾಗಿಸಲು, ಚೀನಾ ಆಕ್ರಮಣಕ್ಕೆ ತಕ್ಕ ಪಾಠ ಕಲಿಸಲು ಯುದ್ಧಕ್ಕೆ ಸಜ್ಜಾದ ಶಾಸ್ತ್ರಿ ಅವರ ನಿಲುವು ವಿಶ್ವಕ್ಕೆ ಮಾದರಿಯಾಗಿದೆ. ಐಷಾರಾಮಿ ಬದುಕು ಬಯಸದೆ ಸರಳತೆಯೇ ಉಸಿರಾಗಿಸಿಕೊಂಡ ಇವರ ತತ್ವ, ಸಿದ್ಧಾಂತ ಯುವಜನತೆಗೆ ಮಾದರಿಯಾಗಬೇಕು ಎಂದರು.

ಎಸ್‌ಐ ಸಿದ್ದಲಿಂಗ ಬಾನಸೆ, ಎಎಸ್‌ಐ ರಮೇಶ್, ಶಿವಲಿಂಗಯ್ಯ, ಮಹದೇವು, ಬಸವರಾಜು, ಕುಮಾರ್, ವಿನೋದ್, ಜಾಫರ್, ಕೃಷ್ಣ, ಸಜಿನಿ, ಶಿಲ್ಪಾ, ಮಮತಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net