ಕಿಕ್ಕೇರಮ್ಮನವರ ಜಾತ್ರೆ

04kkr1( 4-25 kikkeramma degula
Published on

ಕಿಕ್ಕೇರಿ: ಕಿಕ್ಕೇರಿ-ಲಕ್ಷ್ಮೀಪುರ ಜೋಡಿ ಗ್ರಾಮಗಳ ಗ್ರಾಮದೇವಿ ಕಿಕ್ಕೇರಮ್ಮನವರ ಜಾತ್ರೆ ಏ.5ರಂದು ಶನಿವಾರ ಸಂಜೆ 4.30ರಿಂದ 5.30ರ ಶುಭಲಗ್ನದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಕಿಕ್ಕೇರಿಗೆ ಕಿಕ್ಕೇರಮ್ಮಳಾಗಿ, ಲಕ್ಷ್ಮೀಪುರ ಗ್ರಾಮಕ್ಕೆ ಲಕ್ಷ್ಮೀದೇವಿಯಾಗಿ, ಭಕ್ತರಿಗೆ ಮಹಾಲಕ್ಷ್ಮೀಯಾಗಿ ಕರೆಯಿಸಿಕೊಳ್ಳುವ ದೇವಿಗೆ ನಾಡಿನಾದ್ಯಂತ ಭಕ್ತರು ಉಂಟು. ಲಕ್ಷ್ಮೀಪುರ ಗ್ರಾಮದ ಹಾಲುಮತಸ್ಥದ ಬೂನಾಸಿ, ದೊಡ್ಡಹಟ್ಟಿ, ಕೆಂಚಮ್ಮ, ಮಾರಮ್ಮ ವಠಾರದವರು ದೇವಿಯ ಅರ್ಚಕರಾಗಿದ್ದು, ವರ್ಷಕ್ಕೊಮ್ಮೆ ಯುಗಾದಿಯ ಪಂಚಮಿಯಂದು ಮಾತ್ರ ವಿಪ್ರ ಸಮುದಾಯದವರಿಗೆ ಪೂಜಿಸಲು ಮೀಸಲು ಇದೆ.

ಜಾತ್ರೆ ದಿನದ ಲಕ್ಷ್ಮೀಪುರ ಗ್ರಾಮದವರ ಪೌರಾಣಿಕ ನಾಟಕೋತ್ಸವ, ಮರುದಿನದ(ಏ.6) ಸಂಜೆಯ ಹೂವಿನ ಪಲ್ಲಕ್ಕಿ ಉತ್ಸವ, ತದನಂತರದ(ಏ.7) ವಸಂತನ ಹಬ್ಬ, ಓಕುಳಿ ಹಬ್ಬ ಜಾತ್ರೆಯ ವಿಶೇಷವಾಗಿದೆ. ಮುಡುಪು ಎತ್ತಿ ನಿತ್ಯ ಜರುಗುವ ಅನ್ನ ದಾಸೋಹ, ಭಕ್ತರ ಇಷ್ಟಾರ್ಥಕ್ಕೆ ಫಲಿಸುವ ಹೂವು ಕೇಳುವ ಪದ್ಧತಿ, ನವಜೋಡಿಗಳು ಆರಾಧಿಸುವ ವೀಳ್ಯದೆಲೆ ಪೂಜೆ ವಿಶೇಷ ಪೂಜಾರಾಧನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net